




ನೆಲ್ಯಾಡಿ: ಪವಿತ್ರ ಸಂತ ಅಲ್ಫೋನ್ಸ ಕ್ಷೇತ್ರ ದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾಗಿ 26ವರ್ಷಗಳ ಸುದೀರ್ಘ ಸೇವೆಯ ನಂತರ ನಿವೃತ್ತರಾದ ಮಾರ್ ಲಾರೆನ್ಸ್ ಮುಕ್ಕುಯಿ ಅವರಿಗೆ ನ.26ರಂದು ನಡೆದ ಕಾರ್ಯಕ್ರಮದಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದ ಸರ್ವ ಸದಸ್ಯರು ಹಾಗೂ ನಾಡಿನ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಸಮರ್ಪಸಿ ವಿಶ್ರಾಂತ ಜೀವನಕ್ಕೆ ಶುಭವನ್ನು ಹಾರೈಸಲಾಯಿತು.


ಕರಾವಳಿಯಲ್ಲಿ ಸೌಹಾರ್ದತೆ, ಶಾಂತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಶ್ರೀ ಗಳು ನೀಡಿದ ಸೇವೆಯನ್ನು ಗಣ್ಯರು ಸ್ಮರಿಸಿದರು. ನೂತನ ಧರ್ಮಾದ್ಯಕ್ಷ ಮಾರ್ ಜೇಮ್ಸ್ ಪಟ್ಟೆರಿಲ್ ಚರ್ಚ್ ನ ಧರ್ಮ ಗುರು ಫಾದರ್. ಶಾಜಿ ಮಾತ್ಯು, ಫಾ. ಅಲೆಕ್ಸ್, ರೇಜಿಯನಲ್ ಸುಪಿರಿಯರ್ ಸಿಸ್ಟೆರ್ ಲಿಸ್ ಮಾತ್ಯು ಎಸ್.ಎಚ್. ಟ್ರಸ್ಟಿಗಳಾದ ಜೋನ್ಸನ್ ಪುಳಿಕ್ಕಲ್, ರಾಜೇಶ್ ತೆಕ್ಕಿನಾಟ್ಟು, ರೆಜಿ ಕೊಳಂಗರಾತ್, ಜೋಯ್ ಪುತ್ತೆನ್ಪರಂಭಿಲ್, ಸಂಯೋಜಕರಾಗಿ ಜೋರ್ಜ್ ಕುಟ್ಟಿ ಆಯಾಮ್ ಕುಡಿ ಮೊದಲಾದವರು ನೇತೃತ್ವ ವಹಿಸಿದ್ದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗೌರವ ಕಾಣಿಕೆಯನ್ನು ಸಮರ್ಪಿಸಿದರು.









