ವಿಮುಕ್ತಿ ಸ್ವ ಸಹಾಯ ಸಂಘಗಳ ಒಕ್ಕೂಟದಿಂದ ಮಧುಮೇಹ ಕುರಿತಾದ ಆರೋಗ್ಯ ಮಾಹಿತಿ

0

ಬೆಳ್ತಂಗಡಿ: ವಿಶ್ವ ಮಧುಮೇಹ ದಿನದ ಆಚರಣೆಯ ಪ್ರಯುಕ್ತ ವಿಮುಕ್ತಿ ಒಕ್ಕೂಟದ ಆರು ಘಟಕಗಳಾದ ಪಟ್ರಮೆ, ಹಳಪೇಟೆ, ಪೆರ್ಲಬೈಪಾಡಿ, ಆರಂಬೋಡಿ, ಇಂದಬೆಟ್ಟು ಹಾಗೂ ಕನ್ಯಾಡಿ 1 ಇಲ್ಲಿ ಸಕ್ಕರೆ ಖಾಯಿಲೆ ಬಗ್ಗೆ ಮಾಹಿತಿ ನೀಡಲಾಯಿತು. ಇಂದಬೆಟ್ಟು ಘಟಕದ ಆಶಾ ಕಾರ್ಯಕರ್ತೆ ವಿಜಯರವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಇದರ ಪರೀಕ್ಷೆ ಲಭ್ಯವಿದೆ. ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಸಕ್ಕರೆ ಖಾಯಿಲೆಯ ಆರಂಭ, ಪತ್ತೆ ಹಚ್ಚುವಿಕೆ, ಔಷಧೋಪಾಚಾರ, ತಡೆಗಟ್ಟುವ ಕ್ರಮ ಹಾಗೂ ಉತ್ತಮ ಆರೋಗ್ಯಕ್ಕೆ ಸಂಪೂರ್ಣ ಆಹಾರದ ಬಗ್ಗೆ ಅಗತ್ಯ ಮಾಹಿತಿ ನೀಡಲಾಯಿತು. ಸಂಸ್ಥೆಯಿಂದ ರೋಹಿಣಿ, ಸವಿತಾ ಹಾಗೂ ಮೋಹಿನಿಯವರು ಹಾಜರಿದ್ದು ಕಾರ್ಯಕ್ರಮ ನರವೇರಿಸಿದರು. ಆಯಾ ಘಟಕದ ಸದಸ್ಯರು ಸ್ವಾಗತಿಸಿ ಕಾರ್ಯಕ್ರಮದ ನಂತರ ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here