ಪ್ರಾಥಮಿಕ ಶಾಲಾ ವಿಭಾಗದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಗೆ ಬಹುಮಾನ

0

ಧರ್ಮಸ್ಥಳ: ಕಳೆಂಜ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಧರ್ಮಸ್ಥಳ ಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿರುತ್ತಾರೆ.

ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಒಂದನೇ ತರಗತಿಯ ಸಂಪ್ರೀತ್ ಆಶುಭಾಷಣ ಸ್ಪರ್ಧೆ ಮತ್ತು ಧಾರ್ಮಿಕ ಪಠಣ ಸಂಸ್ಕೃತ ಸ್ಪರ್ಧೆಯಲ್ಲಿ, ವಿಹಾನ್ ಮಯ್ಯ ಭಕ್ತಿ ಗೀತೆ ಸ್ಪರ್ಧೆಯಲ್ಲಿ, ನಾಲ್ಕನೇ ತರಗತಿಯ ಶ್ರೀಕಾರ್ ಎಸ್. ಕ್ಲೇ ಮಾಡ್ಲಿಂಗ್ ನಲ್ಲಿ, ನಾಲ್ಕನೇ ತರಗತಿಯ ಶ್ರೇಯಸಿ ಎಚ್. ಎಸ್. ಅಭಿನಯ ಗೀತೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ನಾಲ್ಕನೇ ತರಗತಿಯ ಮಾನ್ವಿ ಡಿ. ದೇಶಭಕ್ತಿ ಗೀತೆಯಲ್ಲಿ ಹಾಗೂ ನಾಲ್ಕನೇ ತರಗತಿಯ ವಿಹಾನ್ ಮಯ್ಯ ಕಥೆ ಹೇಳುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ನಾಲ್ಕನೇ ತರಗತಿಯ ಗೌತಮ್ ಎಂ.ಆರ್. ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಹಾಗೂ ಅಕ್ಷರ ಎಸ್. ಶೆಟ್ಟಿ ಛದ್ಮ ವೇಷ ಸ್ಪರ್ಧೆಯಲ್ಲಿ ತೃತಿಯ ಸ್ಥಾನ ಗಳಿಸಿರುತ್ತಾರೆ.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಐದನೇ ತರಗತಿಯ ರಿಷಿಕಾ ಎಚ್. ಆಶುಭಾಷಣ ಸ್ಪರ್ಧೆಯಲ್ಲಿ, ಏಳನೇ ತರಗತಿಯ ಜಿಶಾಂತ್ ಮಿಮಿಕ್ರಿ ಸ್ಪರ್ಧೆಯಲ್ಲಿ, ಪ್ರಣವ ಜೋಯಿಷ ಪ್ರಬಂಧ ರಚನೆ ಸ್ಪರ್ಧೆಯಲ್ಲಿ, ಆರಾಧ್ಯ ಪಿ. ಜೋಶಿ ಪದ್ಯ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಆರನೇ ತರಗತಿಯ ಆಧ್ಯ ಇಂಗ್ಲೀಷ್ ಕಂಠ ಪಾಠ ಸ್ಪರ್ಧೆಯಲ್ಲಿ, ಏಳನೇ ತರಗತಿಯ ನಿಧಿಶ್ ಕಥೆ ಹೇಳುವ ಸ್ಪರ್ಧೆಯಲ್ಲಿ, ಏಳನೇ ತರಗತಿಯ ಆರುಷ್ ಪಿ. ಜೋಶಿ ಧಾರ್ಮಿಕ ಪಠಣ ಸಂಸ್ಕೃತ ಸ್ಪರ್ಧೆಯಲ್ಲಿ, ಆರನೇ ತರಗತಿಯ ಮಹಿತ ದೇಶಭಕ್ತಿ ಗೀತೆಯಲ್ಲಿ ಹಾಗೂ ವೈದೇಹಿ ಪಿ. ಭಟ್ ಭಕ್ತಿ ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿರುತ್ತಾರೆ.

LEAVE A REPLY

Please enter your comment!
Please enter your name here