




ಬೆಳ್ತಂಗಡಿ: ಮಹಿಳಾ ವೃಂದ ವತಿಯಿಂದ ಮಕ್ಕಳಿಗಾಗಿ ಮಕ್ಕಳ ವೇದಿಕೆ ಅನುವು ಮಾಡಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಮಹಿಳಾ ವೃಂದದ ಅಧ್ಯಕ್ಷೆ ರಜನಿ ವಿ., ಕಾರ್ಯದರ್ಶಿ ಲಾವಣ್ಯ ಹೊಳ್ಳ, ಮಕ್ಕಳ ವೇದಿಕೆಯ ಅಥಿತಿ, ಆಸ್ಕಿಯಾ, ಅರಾ, ಅಧ್ಯಕ್ಷೆ ಸ್ತವ್ಯ ಆರ್. ಶೆಟ್ಟಿ, ಗಣ್ಯಶ್ರೀ, ತೀರ್ಪು ಗಾರರಾದ ರೇಷ್ಮಾ ಕೆ. ಎಸ್. ಸೇವಂತಿ ಆರ್.ಇವರೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು.


ಆಶಾ ಸತೀಶ್ ಮಹಿಳಾ ವೃಂದದ ಸದಸ್ಯರೊಂದಿಗೆ ಮಕ್ಕಳ ಆಟೋಟ ಸ್ಪರ್ಧೆಗಳನ್ನು ನಿರ್ವಹಿಸಿದರು. ಬಳಿಕ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸುಮತಿ ಪ್ರಮೋದ್ ಸ್ವಾಗತಿಸಿದರು. ರಶ್ಮಿ ಪಟ ವರ್ಧನ್ ಚಟುವಟಿಕೆ ಗಳ ನಿರೂಪಣೆ ಮಾಡಿದರು.









