






ಬೆಳ್ತಂಗಡಿ: ಛೇಂಬರ್ ಆಫ್ ಕಾಮರ್ಸ್ ನ 4ನೇ ವಾರ್ಷಿಕ ಸಭೆ ನ. 21ರಂದು ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಲೋಬೊ ಟವರ್ಸ್ ನಲ್ಲಿ ಜರಗಿತು. ಅಧ್ಯಕ್ಷ ರೊನಾಲ್ಡ್ ಲೊಬೊರವರು ಪ್ರಾರ್ಥನೆ ಮೂಲಕ ಸಭೆಯನ್ನು ಪ್ರಾರಂಭಿಸಿ ಬಂದಂತಹ ಎಲ್ಲಾ ವರ್ತಕರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಲ್ಯಾನ್ಸಿ ಪಿರೇರಾ ಒಂದು ವರ್ಷದಲ್ಲಿ ಸಂಘವು ನಡೆಸಿದಂತಹ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ಖಜಾಂಚಿ ಸುನಿಲ್ ಶೆಣೈರವರು ಕಳೆದ ವರ್ಷದ ಖರ್ಚು ವೆಚ್ಚಗಳನ್ನು ಸಭೆಯ ಮುಂದಿಟ್ಟು, ಅನುಮೊದನೆ ಪಡೆದರು. ಸಂಘವನ್ನು ಇನ್ನಷ್ಟು ಬಲಪಡಿಸುವುದು, ಹೊಸ ಸದಸ್ಯರ ಸೇರ್ಪಡೆ, ತುರ್ತು ನಿಧಿ ಸ್ಥಾಪನೆ ಇವುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸ್ಥಾಪಕ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಜತೆ ಕಾರ್ಯದರ್ಶಿ ಯಶವಂತ ಪಟವರ್ಧನ್, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಶಶಿಧರ ಪೈಯವರ ಧನ್ಯವಾದದೊಂದಿಗೆ ಸಭೆ ಮುಕ್ತಾಯವಾಯಿತು.









