





ಮಿತ್ತಬಾಗಿಲು: ಗ್ರಾಮದ ಅಡ್ಕ ನಿವಾಸಿ ಬಿಜೆಪಿ ಬೂತ್ 18ರ ಕಾರ್ಯದರ್ಶಿ ರಮೇಶ್ ಗೌಡ ಅವರು ತಾನು ಕೆಲಸ ಮಾಡುವ ಸಂದರ್ಭದಲ್ಲಿ ಬಿದ್ದು ಗಾಯಗೊಂಡಿದ್ದು, ನ.22ರಂದು ಮನೆಗೆ ಶಾಸಕ ಹರೀಶ್ ಪೂಂಜ ಅವರು ಭೇಟಿ ನೀಡಿ ಆರೋಗ್ಯ ಕ್ಷೇಮ ವಿಚಾರಿಸಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಪಾರೆಂಕಿ, ಲಾಯಿಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ ಲಾಯಿಲ, ಮಲವಂತಿಗೆ ಶಕ್ತಿಕೇಂದ್ರ ಅಧ್ಯಕ್ಷ ಮದುಸೂಧನ್, ಮಿತ್ತಬಾಗಿಲು ಶಕ್ತಿಕೇಂದ್ರ ಅಧ್ಯಕ್ಷ ಸಚಿನ್ ಗೌಡ ಜೊತೆಗಿದ್ದರು.









