




ಬೆಳ್ತಂಗಡಿ: ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ನಿಂದ ಅಧ್ಯಕ್ಷ ರಕ್ಷಿತ್ ಶಿವರಾಂ ಬರೆಯುವ ಪುಸ್ತಕವನ್ನು ವಿತರಣೆ ಮಾಡಿ, ಮಕ್ಕಳಿಗೆ ಶುಭ ಹಾರೈಸಿದರು.



ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗೋಪಾಲ ಪೂಜಾರಿ, ಉಪಾಧ್ಯಕ್ಷೆ ಪ್ರಮೀಳಾ ಹಾಗೂ ಸದಸ್ಯರು, ಶಾಲಾ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್, ಪ್ರಮುಖರಾದ ಶುಭಕರ ಪೂಜಾರಿ, ದಿನೇಶ್ ಕೋಟ್ಯಾನ್, ಸುಂದರ ಬಂಗೇರ, ಸಂದೀಪ್ ಪೂಜಾರಿ, ಗಣೇಶ್ ಕೋಟ್ಯಾನ್, ಜಯ ಪೂಜಾರಿ, ಉಮೇಶ್ ಕುಲಾಲ್, ಲೋಕಯ್ಯ ಕುಂಟ್ಯಾನ, ಪಂಚಾಯತ್ ಸದಸ್ಯರಾದ ಸರೋಜ ಆಂಡಿಂಜೆ, ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಚೇತನಾ, ದಿನೇಶ್ ಸಾವ್ಯ, ಸಂದೀಪ್ ಸಾವ್ಯ, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.









