ಕರಂಬಾರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ

0

ಕರಂಬಾರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.14ರಂದು ಭಾರತದ ಪ್ರಥಮ ಪ್ರಧಾನ ಮಂತ್ರಿಗಳು ಪಂಡಿತ್ ಜವಾಹರಲಾಲ್ ನೆಹರುರವರ ಜನ್ಮ ದಿನಾಚರಣೆಯ ಕಾರ್ಯಕ್ರಮದ ಸಂದರ್ಭದಲ್ಲಿ ನಮ್ಮ ಶಾಲೆ ನಮ್ಮ ತೋಟ ಕಾರ್ಯಕ್ರಮದಡಿಯಲ್ಲಿ ತಾಯಿಗೊಂದು ಮರ ಎಂಬ ಸಿರ್ಸಿಕೆಯಲ್ಲಿ ಶಾಲೆಯ ಜಾಗದಲ್ಲಿ ಅಡಿಕೆ ಗಿಡಗಳನ್ನು ನೆಡುವ ಕಾರ್ಯಕ್ರಮ ಮತ್ತು ಪೋಷಕ/ಶಿಕ್ಷಕ ಸಭೆಯು ಕರಂಬಾರು ಶಾಲೆಯಲ್ಲಿ ನಡೆಯಿತು.

ಈ ಕಾರ್ಯ ಕ್ರಮದಲ್ಲಿ ಕರಂಬಾರು ಗ್ರಾಮದ ಬೊಟ್ಯಾಲ್ಮಾರ್ ಕೊಡಮಣಿತಾಯ ಜಾತ್ರೆ ಸಮಿತಿಯ ಅಧ್ಯಕ್ಷ ಪ್ರಸನ್ನ ಹೆಗ್ಡೆ ಕರಂಬಾರು ಅಡಿಕೆ ಗಿಡ ನೆಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದ್ದರು. ಕಾರ್ಮಕ್ರಮದ ಮುಖ್ಯ ಅತಿಥಿಗಳಾಗಿ ಶಿರ್ಲಾಲು ಗ್ರಾಮ ಪಂಚಾಯತ್ ಉಪಾದ್ಯಕ್ಷ ಸೋಮನಾಥ ಬಂಗೇರ, ಸಭೆಯ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಎಂ.ಕೆ. ವಹಿಸಿಕೊಂಡಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲೆ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವಿವೇಕ್ ಕೆಳ್ಕರ, ಸಮಿತಿಯ ಉಪಾದ್ಯಕ್ಷರು ವಿಜಯ ಉಪಸ್ಥಿರಿದ್ದರು.

ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಛಾವಣ್ ಸ್ವಾಗತಿಸಿದರು. ಶಿಕ್ಷಕಿಯಾದ ಸಾವಿತ್ರಿ ಅವರು ಪೋಷಕ/ಶಿಕ್ಷಕ ಬಗ್ಗೆ ಪ್ರಾಸ್ಥಾವಿಕ ಮಾತನಾಡಿದರು. ಶಿಕ್ಷಕಿ ಲತಾ ಮಕ್ಕಳ ಶಿಕ್ಷಣದೊಟ್ಟಿಗೆ ಪೋಷಕರ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮವನ್ನು ಶಿಕ್ಷಕಿ ತಸ್ಮಿಯ ನೀರೂಪಿಸಿದರು. ಶಾಲಾ ಶಿಕ್ಷಕಿ ಸ್ವಾತಿ, ಶಾಲಾಭಿವೃದ್ಧಿ ಸದಸ್ಯರು, ಬಿಸಿ ಊಟ ನೌಕರರು, ಮಕ್ಕಳ ಪೋಷಕರು, ಮಕ್ಕಳು ಭಾಗವಹಿಸಿದರು. ಜ್ಞಾನ ದೀಪ ಶಿಕ್ಷಕ ಸದಾಶಿವ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here