ಸುದೆಮುಗೇರು: ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ಸುದೆಮುಗೇರು: ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ನ. 14ರಂದು ಆಚರಿಸಲಾಯಿತು. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸುದೆಮುಗೇರು ವಲಯದ ಏಳು ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಶೈನ್ ಫ್ರೆಂಡ್ಸ್ ತಂಡ ಮತ್ತು ದ್ವಿತೀಯ ಬಹುಮಾನವನ್ನು ಟೀಮ್ ಫೈವ್ ಶಾಟ್ಸ್ ಪಡೆದುಕೊಂಡಿದೆ.

ವಿಜೇತರಿಗೆ ಬೆಳ್ತಂಗಡಿ ನಗರದ ನಮ್ಮ ಕ್ಲಿನಿಕ್ ಆರೋಗ್ಯ ಕೇಂದ್ರದ ವೈದ್ಯೆ ರಕ್ಷಿತ ಅವರು ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಡಿ. ಜಗದೀಶ್, ಅಂಗನವಾಡಿ ಶಿಕ್ಷಕಿ ದಿವ್ಯ, ಸಹಾಯಕಿ ರೋಹಿಣಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here