ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ ನೂತನ ಬಿಷಪ್‌ರಿಗೆ ಸನ್ಮಾನ

0

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ಸಂಸ್ಥೆಯಿಂದ ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಬಿಷಪ್ ಮಾರ್ ಜೇಮ್ಸ್ ಪಟ್ಟೆರಿಲ್ CMF, ಅವರಿಗೆ ಸನ್ಮಾನ ಹಾಗೂ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮವು ಇಂದು ಸಂಜೆ ಬೆಳ್ತಂಗಡಿ ಬಿಷಪ್ ಹೌಸ್‌ನಲ್ಲಿ ನಡೆಯಿತು. ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಅಧ್ಯಕ್ಷ ಅಗಸ್ಟೀನ್ T. A., ಗೌರವಾಧ್ಯಕ್ಷ ಸೆಬಾಸ್ಟಿಯನ್ P. T., ಉಪಾಧ್ಯಕ್ಷ ಮ್ಯಾಥ್ಯೂ V. T., ಕಾರ್ಯದರ್ಶಿ ಶಿಜೋ ಜೋಸೆಫ್, ಕೋಶಾಧಿಕಾರಿ ರಂಜಿತ್ P. S, ಮಾಜಿ ಅಧ್ಯಕ್ಷ ಜೋಸೆಪ್ ಕೆ.ಡಿ. ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸಂಸ್ಥೆಯ ಪರವಾಗಿ ಅಧ್ಯಕ್ಷ ಅಗಸ್ಟೀನ್ T. A. ಬಿಷಪ್ ರೊಂದಿಗೆ ಮಾತನಾಡಿ ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಸಂಘವು ಜನಸೇವೆ, ಬಡವರ ಏಳಿಗೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ನೂತನ ಧರ್ಮಾಧ್ಯಕ್ಷ ಮಾರ್ ಜೇಮ್ಸ್ ಪಟ್ಟೆರಿಲ್ ಬಿಷಪರ ಸಹಕಾರ ಮತ್ತು ಪ್ರೇರಣೆಯಿಂದ ಮುಂದಿನ ದಿನಗಳಲ್ಲಿ ಸಂಘದ ಕಾರ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ಸಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾರ್ ಜೇಮ್ಸ್ ಪಟ್ಟೆರಿಲ್ ಬಿಷಪರಿಗೆ ಸನ್ಮಾನ ಪತ್ರ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ಸದಸ್ಯರು ಭಿಷಪರೊಂದಿಗೆ ಮಾತುಕತೆ ನಡೆಸಿ, CBK ಸಂಘಟನೆಯ ಭವಿಷ್ಯ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು. ಬಿಷಪ್ ಸಂಘಟನೆಯ ಸೇವಾ ಚಟುವಟಿಕೆಗಳನ್ನು ಮೆಚ್ಚಿ, “ಇಂತಹ ಸಂಸ್ಥೆಗಳು ಸಮಾಜದ ಹಿತಕ್ಕಾಗಿ ಸೇವೆ ಸಲ್ಲಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ. ಯಾರು ಇಲ್ಲದವರಿಗೆ ನೀವು ಇದ್ದೀರಿ ಎಂಬುದು ನಿಜವಾದ ಕ್ರೈಸ್ತ ಸೇವೆಯ ಸಂಕೇತ,” ಎಂದು ಪ್ರೋತ್ಸಾಹದ ಮಾತುಗಳನ್ನು ನೀಡಿ ಆಶೀರ್ವಾದ ನೀಡಿದರು.

LEAVE A REPLY

Please enter your comment!
Please enter your name here