




ಬೆಳ್ತಂಗಡಿ: ಅಳದಂಗಡಿಯಲ್ಲಿರುವ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ವತಿಯಿಂದ ಸಮಾಜ ಸೇವೆಯ ಭಾಗವಾಗಿ ಸಹಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಣ್ಣು ನಾಯ್ಕ (102 ವ) ಮತ್ತು ಕಲ್ಯಾಣಿ (70 ವ) ಕೊಡಂಗೆಬೈಲು ಶಿರ್ಲಾಲು ಅವರಿಗೆ ಅಕ್ಕಿ, ಬೇಳೆ, ಎಣ್ಣೆ, ಮಸಾಲೆ, ತರಕಾರಿಗಳು ಸೇರಿದಂತೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಜನ ಔಷಧಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಾದ ದಿವ್ಯ ಹಾಗೂ ರಮ್ಯಾ ಅವರ ಮೂಲಕ ಹಸ್ತಾಂತರಿಸಲಾಯಿತು. ಈ ಸಣ್ಣ ಪ್ರಯತ್ನ ಕೇವಲ ಔಷಧಿಗಳ ಮಾರಾಟಕ್ಕಿಂತಲೂ ಸಮಾಜದ ಹಿರಿಯರ ಕಾಳಜಿಯನ್ನು ವ್ಯಕ್ತಪಡಿಸುವ ಮಾನವೀಯ ಹೆಜ್ಜೆಯಾಗಿದೆ. ಪ್ರತಿ ವರ್ಷ ನಮ್ಮ ಕೇಂದ್ರದಿಂದ ಇಂತಹ ಸಣ್ಣ ಸೇವಾ ಕಾರ್ಯಗಳನ್ನು ಮುಂದುವರೆಸುತ್ತಾ ಸಮಾಜದ ಮೇಲಿನ ನಮ್ಮ ಬದ್ಧತೆಯನ್ನು ದೃಢಪಡಿಸುತ್ತಿದ್ದೇವೆ ಎಂದು ಸಂಸ್ಥೆಯ ಮಾಲಕರಾದ ಡಾ. ಅನಿಲ ದೀಪಕ್ ಶೆಟ್ಟಿ ಮತ್ತು ಉಷಾ ಶ್ರೀಧರ ಭಂಡಾರಿ ತಿಳಿಸಿದ್ದಾರೆ.









