


ಬೆಳ್ತಂಗಡಿ: 2025-26ನೇ ಸಾಲಿನ ದ್ವಿತೀಯ ತ್ರೈಮಾಸಿಕ ಜಿಲ್ಲಾ ಕೆ. ಡಿ.ಪಿ ಪ್ರಗತಿ ಪರಿಶೀಲನ ಸಭೆಯು ನ.15ರಂದು ಪೂರ್ವಹ್ನ 10:30 ಗಂಟೆಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ ನೇತ್ರಾವತಿ ಸಂಭಾಗಣ ಮಂಗಳೂರು ಇಲ್ಲಿ ನಡೆಯಲಿರುತ್ತದೆ ಎಂದು ಜಿಲ್ಲಾ ಕೆ.ಡಿ.ಪಿ. ಸದಸ್ಯ ನ್ಯಾಯವಾದಿ ಸಂತೋಷ್ ಕುಮಾರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಆದ್ದರಿಂದ ಸಾರ್ವಜನಿಕರು ಸರಕಾರಿ ಕಾಮಗಾರಿಗಳ ಹಾಗೂ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ವಿಳಂಬದ ಕುರಿತು ಮಾಹಿತಿಗಳನ್ನು ಕಛೇರಿಗೆ ನೀಡುವಂತೆ ಕೋರಲಾಗಿರುತ್ತದೆ.









