




ಬೆಳ್ತಂಗಡಿ: ಭಾರತೀಯ ದಂತ ವೈದ್ಯರ ಸಂಘ ಕರ್ನಾಟಕ ಘಟಕದ ನಿಯೋಜಿತ ಅಧ್ಯಕ್ಷರಾಗಿ ಡಾ. ರಾಘವೇಂದ್ರ ಪಿದಮಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರವಾರದಲ್ಲಿ ನಡೆದ ಭಾರತೀಯ ದಂತ ವೈದ್ಯ ಕರ್ನಾಟಕದ ೫೧ನೇ ಸಮ್ಮೇಳನದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಡಾ. ರಾಘವೇಂದ್ರ ಅವರು ವಿಟ್ಲ ಸಮೀಪದ ಪಿದಮಲೆಯವರಾಗಿದ್ದು ೨೫ ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಶಕ್ತಿನಗರದಲ್ಲಿ ವಾಸ್ತವ್ಯವಿದ್ದಾರೆ. ಧಾರವಾಡದ ಎಸ್.ಡಿ.ಎಂ. ದಂತ ವೈದ್ಯಕೀಯ ಕಾಲೇಜಿನಲ್ಲಿ ಬಿ.ಡಿ.ಎಸ್. ಪದವಿ ಮತ್ತು ಎ.ಜೆ. ದಂತ ವೈದ್ಯಕೀಯ ಕಾಲೇಜಿನಲ್ಲಿ ಎಂಡಿಎಸ್ ಪದವಿ ಪಡೆದಿರುವ ಇವರು ಪ್ರಸ್ತುತ ಸುಳ್ಯ ಕೆವಿಜಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳ ದಂತ ಚಿಕಿತ್ಸಾ ವಿಭಾಗದ ಪ್ರೊಫೆಸರ್ ಆಗಿದ್ದಾರೆ. ವಕ್ರದಂತ ತಜ್ಞೆಯಾಗಿರುವ ಪತ್ನಿ ಡಾ. ಆಶಾ ಪಿದಮಲೆ ಅವರೊಂದಿಗೆ ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿ ಶ್ರೀದುರ್ಗಾ ದಂತ ಚಿಕಿತ್ಸಾಲಯ ನಡೆಸುತ್ತಿರುವ ಇವರು ಹತ್ತು ವರ್ಷಗಳಿಂದ ರಾಷ್ಟ್ರೀಯ ದಂತ ವೈದ್ಯರ ಸಂಘದ ಸೆಂಟ್ರಲ್ ಕೌನ್ಸಿಲ್ ಸದಸ್ಯರಾಗಿದ್ದಾರೆ. ಪುತ್ತೂರು ಭಾರತೀಯ ದಂತ ವೈದ್ಯರ ಸಂಘದ ನಿಕಟಪೂರ್ವ ಅಧ್ಯಕ್ಷರಾಗಿರುವ ಡಾ. ರಾಘವೇಂದ್ರ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.





