




ಮಲೆಬೆಟ್ಟು: ಕೊಯ್ಯೂರು ಗ್ರಾಮದ ಪೆರುಂಬುಡೇಲು ನಿವಾಸಿ ನಾರಾಯಣ ಮಡಿವಾಳ(80ವ) ನ. 5ರಂದು ರಾತ್ರಿ 11.15ಕ್ಕೆ ಅಲ್ಪಕಾಲದ ಅಸೌಖ್ಯದ ಕಾರಣ ಸ್ವಗೃಹದಲ್ಲಿ ನಿಧನರಾದರು. ದೈವಾರಾಧನೆಯಲ್ಲಿ ಜೀಟಿಗೆ ಹಿಡಿಯುವ ಮೂಲಕ ಊರಿನಲ್ಲಿ ಜನಾನುರಾಗಿದ್ದರು. ಮೃತರು ಮಕ್ಕಳಾದ ಬದನಾಜೆ ಸ.ಉ.ಪ್ರಾ.ಶಾಲೆಯ ಶಿಕ್ಷಕಿ ಇಂದಿರಾ ಮತ್ತು ಪಿಲ್ಯ ಸ.ಉ.ಪ್ರಾ.ಶಾಲೆಯ ಸುನಂದಾ ಸೇರಿದಂತೆ ಸರೋಜಿನಿ, ಮೋಹಿನಿ ಮತ್ತು ಜಯಂತಿ ಹಾಗೂ ಉಜಿರೆ ಜನಾರ್ದನ ಗ್ಯಾರೇಜ್ ನ ಮೆಕ್ಯಾನಿಕ್ ಸುರೇಶ್ ಮಡಿವಾಳ ಮತ್ತು ದಿನೇಶ್ ಅವರನ್ನು ಅಗಲಿದ್ದಾರೆ.









