


ಬೆಳ್ತಂಗಡಿ: ಸಂಕ್ರಿ ಮೋಷನ್ ಪಿಚ್ಚರ್ಸ್ ಅರ್ಪಿಸಿ, ಸೂರ್ಯೋದಯ ಪೆರಂಪಳ್ಳಿ ನಿರ್ಮಾಣ ಮತ್ತು ಉಮೇಶ್ ಕುಮಾರ್ ಬೆಳ್ತಂಗಡಿ ಅವರ ಸಹ ನಿರ್ಮಾಣದಲ್ಲಿ ತಯಾರಾದ ತುಳುನಾಡ ದೈವಿ ಪುರುಷರಾದ ಕೋಟಿ ಚೆನ್ನಯರ ತಾಯಿ “ದೇಯಿ ಬೈದೆತಿ” ಚಲನ ಚಿತ್ರ, ” 2018ರ ಸಾಲಿನ ಅತುತ್ತಮ ಕರ್ನಾಟಕ ಪ್ರಾದೇಶಿಕ ಚಲನ ಚಿತ್ರ ಪ್ರಶಸ್ತಿ ಪಡೆದಿದ್ದು, ಮೈಸೂರಿನಲ್ಲಿ ನ. 3ರಂದು ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.


“ಉತ್ತಮ ನಿರ್ದೇಶಕ “ಮತ್ತು “ಅತ್ಯುತಮ ಚಲನ ಚಿತ್ರ ” ಸಹಿತ ಈ ಚಲನ ಚಿತ್ರದ ಹಿನ್ನಲೆ ಗಾಯನಕ್ಕೆ ಕಲಾವತಿ ದಯಾನಂದ್ ಇವರಿಗೆ “ಕರ್ನಾಟಕದ ಅತ್ಯುತ್ತಮ ಹಿನ್ನಲೆ ಗಾಯಕಿ “ಪ್ರಶಸ್ತಿ ಯೊಂದಿಗೆ ಒಟ್ಟು ಮೂರು ಪ್ರಶಸ್ತಿಗೆ ಈ ಚಲನಚಿತ್ರ ಭಾಜನವಾಗಿರುತ್ತದೆ.








