


ಬೆಳ್ತಂಗಡಿ: ಪುಂಜಾಲಕಟ್ಟೆ ವಲಯ ಮಟ್ಟದ 17ರ ವಯೋಮಾನದ ಬಾಲಕ ಹಾಗೂ ಬಾಲಕಿಯರ ಅಥ್ಲೆಟಿಕ್ ಕ್ರೀಡಾಕೂಟವು ಗೇರುಕಟ್ಟೆ ಸರಕಾರಿ ಪ್ರೌಢಶಾಲೆ ಕ್ರೀಡಾಕೂಟ ನ.4.ರಂದು ನಡೆಯಿತು.
ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ. ಚಾಲನೆ ನೀಡಿ, ಶುಭ ಹಾರೈಸಿದರು. ಕಳಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಇಂದಿರಾ ಬಿ.ಶೆಟ್ಟಿ, ಸದಸ್ಯೆ ಸುಭಾಷಿಣಿ ಕೆ. ಗೇರುಕಟ್ಟೆ ಕಾಲೇಜು ಪ್ರಭಾರ ಪ್ರಾಂಶುಪಾಲ ಬ್ರಮಾರಾಂಬಿಕ, ಉಪ ಪ್ರಾಂಶುಪಾಲೆ ಈಶ್ವರಿ ಕೆ., ಡಾ.ಅನಂತ್ ಭಟ್ಹಾಗೂ ಎಸ್.ಡಿ. ಎಂ.ಸಿ.ಎ. ಸದಸ್ಯರು ಉಪಸ್ಥಿತರಿದ್ದರು.


ಅಥ್ಲೆಟಿಕ್ ಕ್ರೀಡಾ ಕೂಟದ ಸಂಪೂರ್ಣ ವೆಚ್ಚವನ್ನು ಸ್ಥಳೀಯ ಸೌದಿ ಅರೇಬಿಯಾ ಉದ್ಯಮಿ ಮುಸ್ತಫಾ ಪೋಷಕ ಬಿ.ಐ.ಮಹಮ್ಮದ್ ಅವರನ್ನು ಸನ್ಮಾನಿಸಲಾಯಿತು.
ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಗೋಪಾಲ ಗೌಡ ಎಂ.ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಹ ಶಿಕ್ಷಕ ದಿನೇಶ್ ನಿರೂಪಣೆ ಮಾಡಿದರು.









