


ಉಜಿರೆ: ಮುಂಡತ್ತೋಡಿ ಗೆಳೆಯರ ಬಳಗದಿಂದ ಕೆಸರ್ ದ ಗೊಬ್ಬು ಮತ್ತು ಸಾಧಕರಿಗೆ ಸನ್ಮಾನ ನ. 16ರಂದು ಮುಂಡತ್ತೋಡಿ ಚಾವಡಿ ಬೈಲು ವಿನಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮತ್ತು ಕ್ರೀಡಾಂಗಣ ಉದ್ಘಾಟನೆಯನ್ನು ಉಜಿರೆ ಸಿವಿಲ್ ಇಂಜಿನಿಯರ್ ವಿದ್ಯಾ ಕುಮಾರ್ ಕಾಂಚೋಡು ಮಾಡಲಿದ್ದಾರೆ. ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡತ್ತೋಡಿ ಗೆಳೆಯರ ಬಳಗದ ಗೌರವಾಧ್ಯಕ್ಷ ಗಣೇಶ್ ಡಿ.ಪಿ. ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಎಸ್. ಆರ್. ಬಾರ್ ಮಾಲಕ ಅಜಿತ್ ಸಾಲಿಯಾನ್, ಬಾಗಲಕೋಟೆ ಉದ್ಯಮಿ ಬಾಲಕೃಷ್ಣ ಗೌಡ ಚಾವಡಿ, ಬೆಳ್ತಂಗಡಿ ನೋಟರಿ ವಕೀಲ ಶ್ರೀನಿವಾಸ ಗೌಡ, ಸಾವ್ಯ ಕೃಷಿಕ ಹಾಗೂ ಮಾಜಿ ಕಂಬಳದ ಓಟಗಾರ ಸದಾಶಿವ ಹೆಗ್ಡೆ, ಬೆಳ್ತಂಗಡಿ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ವಿಜಯ್ ಗೌಡ, ಉಜಿರೆ ಇಂಡಿಯನ್ ಅರ್ಥ್ ಮೂವರ್ಸ್ ಲಕ್ಷ್ಮಣ ಸಪಲ್ಯ, ಉಜಿರೆ ಪೆರ್ಲ ರೋಡ್ ಕಾನು ಮನೆ ಉದ್ಯಮಿ ಶಂಕರನಾರಾಯಣ ಭಟ್, ಉಜಿರೆ ಆರ್.ಎಂ. ಅರ್ಥ್ ಮೂವರ್ಸ್ ರವಿ ಚಕ್ಕಿತ್ತಾಯ, ಉಜಿರೆ ಅಮೃತ್ ಸಿಲ್ಕ್ ಪ್ರಶಾಂತ್ ಜೈನ್ ಭಾಗವಹಿಸಲಿದ್ದಾರೆ.
ಮುಂಡತ್ತೋಡಿ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ದೇವರಾಜ್ ನೋಂಡೇಲ್, ಉಜಿರೆ ಇಂಡಿಯನ್ ಬೇಕರಿ ಗಣೇಶ್ ನಾಯರ್ ಕಲ್ಮಂಜ ಗೆಳೆಯರ ಬಳಗದ ಅಧ್ಯಕ್ಷ ಸುಬ್ರಯ ಕಲ್ಮಂಜ, ಪುತ್ತೂರು ನಲಿಕೆ ಅಖಿಲ ಸೇವಾ ಸಂಘ, ರಾಜ್ಯ ಪಾಣಾರ ಅಧ್ಯಕ್ಷ ದಯಾನಂದ ಶೇರ, ಬೆಳ್ತಂಗಡಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಸೌಮ್ಯ ಲಾಯಿಲ, ಮುಂಡತ್ತೋಡಿ ಸಂಜೀವಿನಿ ನಿಲಯ ಅಶೋಕ ಕರ್ಕೇರ, ಬದನಾಚೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಯ್ಯಗೌಡ ಮಾಚಾರು, ಬೆಳ್ತಂಗಡಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಚಾಲಕ ಮನೋಜ್ ಕುಂಜರ್ಪ ಉಜಿರೆ, ಕುಂಟಾಲಪಲ್ಕೆ ಶ್ರೀ ಸ್ವಾಮಿ ಕೊರಗಜ್ಜ ದೇವಸ್ಥಾನದ ಆನಂದ ನಲ್ಕೆ, ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ್ ಗೌಡ ಗುರುಪ್ರಸಾದ್ ಕೋಟ್ಯಾನ್ ಬಿ. ಎಸ್. ಎಲಿಯಾಸ್, ಸವಿತಾ ಕೇಶವ ಪಡ್ಪು ಉಪಸ್ಥಿತರಿರುವರು.
ಕ್ರೀಡಾ ಕೂಟ: ಪುರುಷರಿಗೆ: ಹಗ್ಗ ಜಗ್ಗಾಟ, ಉಪ್ಪು ಮುಡಿ, ಮಡಕೆ ಒಡೆಯುವುದು, ಹಿಮ್ಮುಖ ಓಟ,100 ಮೀ ಓಟ
ಮಹಿಳೆಯರಿಗೆ: ಹಗ್ಗ ಜಗ್ಗಾಟ, ಲಿಂಬೆ ಚಮಚ, ಸಂಗೀತ ಕುರ್ಚಿ, ಮಡಕೆ ಒಡೆಯುವುದು, ತಲೆಗೆ ಸ್ನಾ ಹಾಕುವುದು
ಸಾರ್ವಜನಿಕರಿಗೆ: ನಿಧಿ ಹುಡುಕುವುದು
1ರಿಂದ 4ನೇ ತರಗತಿ ವರೆಗಿನ ಬಾಲಕಿಯರಿಗೆ : ಬಾಲ್ ಪಾಸಿಂಗ್,ಬಕೆಟ್ ಗೆ ಬಾಲ್ ಹಾಕುವುದು


1ರಿಂದ 4ನೇ ತರಗತಿ ವರೆಗಿನ ಬಾಲಕರಿಗೆ: ಬಾಲ್ ಪಾಸಿಂಗ್, ಬಕೆಟ್ ಗೆ ಬಾಲ್ ಹಾಕುವುದು
5 ರಿಂದ 7ನೇ ತರಗತಿ ವರೆಗಿನ ಬಾಲಕಿಯರಿಗೆ : 50 ಮೀ ಓಟ, ಲಿಂಬೆ ಚಮಚ
5 ರಿಂದ 7ನೇ ತರಗತಿ ವರೆಗಿನ ಬಾಲಕರಿಗೆ: 50 ಮೀ ಓಟ, ಹಿಮ್ಮುಖ ಓಟ
8 ರಿಂದ 10ನೇ ತರಗತಿ ವರೆಗಿನ ಬಾಲಕಿಯರಿಗೆ: 100 ಮೀ ಓಟ, ಲಿಂಬೆ ಚಮಚ
8 ರಿಂದ 10ನೇ ತರಗತಿ ವರೆಗಿನ ಬಾಲಕರಿಗೆ: 100 ಮೀ ಓಟ, ಉಪ್ಪು ಮುಡಿ
ವಿಶೇಷ ಸೂಚನೆ: ಪಂದ್ಯಾಟ 10:00 ಗಂಟೆಗೆ ಪ್ರಾರಂಭ
- ತೀರ್ಪುಗಾರರ ಹಾಗೂ ಸಂಘಟಕರ ತೀರ್ಮಾನವೇ ಅಂತಿಮ ವಾಲಿಬಾಲ್ ಮತ್ತು ತ್ರೋಬಾಲ್
- ಭಾಗವಹಿಸುವ ತಂಡಗಳು 15-11-2025 ಒಳಗಡೆ ಹೆಸರನ್ನು ನೋಂದಾಯಿಸಬೇಕು
- ಹಗ್ಗಜಗ್ಗಾಟ ತಂಡಗಳನ್ನು ಸ್ಥಳದಲ್ಲಿ ರಚಿಸಲಾಗುವುದು.
ಸಾಯಂಕಾಲ ಗಂಟೆ 6:00ರಿಂದ ಬಹುಮಾನ ವಿತರಣೆ, ನಂತರ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶ್ರೀ ಜನಾರ್ಧನ ಕುಪ್ಪೆ ಪದವು ನೇತೃತ್ವದಲ್ಲಿ ಶ್ರೀ ರಾಜ್ ಬಾಯರ್ ಪದ್ಯ ರಚನೆಯ ಶ್ರೀ ಸ್ವಾಮಿ ಕೊರಗಜ್ಜ ಕೃಪಾಪೋಷಿತ ಯಕ್ಷಗಾನ ಮ೦ಡಳಿ ಶ್ರೀ ಕ್ಷೇತ್ರ ಕುಪ್ಪೆ ಪದವು ಕಲ್ಲಾಡಿ ಇದರ ಆಶ್ರಯದಲ್ಲಿ ಬೊಳ್ಳಿ ಮಲೆತ ಬೊಲ್ಪು ಖ್ಯಾತಿಯ ಯಕ್ಷಗಾನ ಹಾಸ್ಯ ವೈಭವ ನಡೆಯಲಿದೆ.


 
            
