


ಉಜಿರೆ: ಆರ್ಥಿಕ ಸಂಸ್ಥೆಗಳು ವ್ಯಾವಹಾರಿಕ ಬದ್ಧತೆಯ ಜೊತೆಗೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿಕೊಂಡು ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಸ್ವಚ್ಛತೆಯು ಪ್ರತಿಯೊಬ್ಬ ನಾಗರಿಕನ ಮೂಲಬೂತವಾದ ಕರ್ತವ್ಯವಾಗಿರಬೇಕು. ಆದ್ದುದರಿಂದ ಸ್ವಚ್ಛ ಪರಿಸರ ನಮ್ಮ ವೈಯಕ್ತಿಕ ಜವಾಬ್ದಾರಿ ಎಂದು ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಎಸ್. ಆರ್. ಹರೀಶ್ ಆಚಾರ್ಯ ಹೇಳಿದರು.
ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಜಿರೆ ಶಾಖೆಯ ವತಿಯಿಂದ ‘ಸ್ವಚ್ಛತಾ ಹೀ ಸೇವಾ”ಎಂಬ ಆಶಯದಂತೆ ನಡೆದ ಸ್ವಚ್ಚ ಭಾರತ ಶ್ರಮದಾನ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು. ಸ್ವಚ್ಛ ಪರಿಸರ ರೂಪಿಸುವುದು ವೈಯಕ್ತಿಕ ಜವಾಬ್ದಾರಿಯಿಂದ ಮಾತ್ರವಲ್ಲದೇ ಪ್ರತಿಯೊಬ್ಬ ನಾಗರೀಕನ ಸಾಮೂಹಿಕ ಭಾಗಿದಾರಿಕೆಯೂ ಆಗತ್ಯವಿದೆ. ನಮ್ಮ ಕಸ, ನಮ್ಮ ಪರಿಸರ, ಅದು ನಮ್ಮ ಜವಾಬ್ದಾರಿ ಎಂಬ ಧ್ಯೇಯವಾದಾಗ ಮಾತ್ರ ಸ್ವಚ್ಛ ಭಾರತ ಸಾಧ್ಯ ಎಂಬುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.


ಗೌಡರ ಯಾನೆ ವಕ್ಕಲಿಗರ ಸಂಘದ ಗೌರವಾಧ್ಯಕ್ಷ ಗೋಪಾಲ ಕೃಷ್ಣ ಜಿ.ಕೆ ಮಾತನಾಡಿ ವಿಶ್ವಕರ್ಮ ಸಹಕಾರ ಬ್ಯಾಂಕ್ ತನ್ನ ಬ್ಯಾಂಕಿಗ್ ಚಟುವಟಿಕೆಗಳ ಜೊತೆ ಜೊತೆಗೆ ಸ್ವಚ್ಛತೆಯಂತಹ ಪ್ರಮುಖ ಸಾಮಾಜಿಕ ಕಾರ್ಯಕ್ರಮವನ್ನು ಮುಂದಿನ ಹತ್ತು ತಿಂಗಳು ನಿರಂತರವಾಗಿ ಉಜಿರೆಯ ಪರಿಸರದಲ್ಲಿ ಹಮ್ಮಿಕೊಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಉಜಿರೆಯ ಬಸ್ ನಿಲ್ದಾಣದ ಆವರಣ ಮತ್ತು ಸುತ್ತಲಿನ ಪರಿಸರ, ರಿಕ್ಷಾ ನಿಲ್ದಾಣ, ಉಜಿರೆಯ ಸರ್ಕಲ್ ಸುತ್ತಲಿನ ಪರಿಸರದ ಸ್ವಚ್ಛತೆಯ ಶ್ರಮದಾನ ಕಾರ್ಯಕ್ರಮ ಜರುಗಿತು.
ಪಟ್ಟಣದ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಕೆ. ಮೋಹನ್ ಕುಮಾರ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಮಹೇಶ್ ಶೆಟ್ಟಿಯವರು ಹಸಿರು ನಿಶಾನೆ ತೋರುವ ಮೂಲಕ ಶ್ರಮದಾನವನ್ನು ಚಾಲನೆ ಮಾಡಿದರು. ಬ್ಯಾಂಕಿನ ಹಿರಿಯ ನಿರ್ದೇಶಕ ಡಿ. ಭಾಸ್ಕರ ಆಚಾರ್ಯ, ಗೌಡರ ಯಾನೆ ವಕ್ಕಲಿಗರ ಸಂಘದ ಗೌರವಾಧ್ಯಕ್ಷ ಪ್ರಕಾಶ್ ಮತ್ತು ಸದಸ್ಯರು, ಉಜಿರೆ ವರ್ತಕರ ಸಂಘದ ಅಧ್ಯಕ್ಷರಾದ ಪ್ರಸಾದ್ ಬಿ.ಎಸ್. ಮತ್ತು ಉಪಾಧ್ಯಕ್ಷ ಜಯಂತ್ ಮಡಿವಾಳ ಮತ್ತು ಸದಸ್ಯರು, ಸಿಎ ಅಭಿನವ್ ಕುಲಾಲ್, ಸಾಮಾಜಿಕ ಕಾರ್ಯಕರ್ತ ಉಮೇಶ್ ಆಚಾರ್ಯ ಕಾನರ್ಪ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಮಾಲಿನಿ ಅಂಚನ್ ಹಾಗೂ ವಿದ್ಯಾರ್ಥಿಗಳು, ಗ್ರಾಮ ಪಂಚಾಯತಿ ಉಜಿರೆಯ ಸಿಬ್ಬಂದಿಗಳು, ಶಾಖಾ ವ್ಯವಸ್ಥಾಪಕ ಲೋಕೇಶ್ ಎಸ್. ಆರ್. ಮತ್ತು ಬ್ಯಾಂಕಿನ ಸಿಬ್ಬಂದಿಗಳು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.










