




ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಅ.23ರಂದು ಸಂಜೆ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ಪತ್ನಿ ಸುಜಿತಾ ವಿ. ಬಂಗೇರ ಮತ್ತು ಮಗಳು ಬಿನುತಾ ಬಂಗೇರ ಭೇಟಿ ನೀಡಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಿವಾಕರ ಪೂಜಾರಿ ಕಳೆಂಜೊಟ್ಟು, ಸದಸ್ಯರಾದ ದಿನೇಶ್ ನಾಯ್ಕ್ ಕೋಟೆ, ಸನತ್ ಕುಮಾರ್ ಮೂರ್ಜೆ, ಚಂದ್ರಾವತಿ ಗೌಡ ಪರಾರಿ, ಚಂದ್ರಶೇಖರ ಗೌಡ ಪರಾರಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಲೋಕಯ್ಯ ಪೂಜಾರಿ ಬರಮೇಲು, ಉಪಾಧ್ಯಕ್ಷ ಬಾಲಣ್ಣ ಗೌಡ ಬಳ್ಳಿ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕೋಶಾಧಿಕಾರಿ ಸುಮತಿ ಬರಮೇಲು, ಭಜನಾ ಮಂಡಳಿಯ ಕೋಶಾಧಿಕಾರಿ ಜಯಂತ ಗೌಡ ಪರಾರಿ ಸ್ವಾಗತಿಸಿದರು. ದೇವಸ್ಥಾನದ ಆಡಳಿತ ಮಂಡಳಿಯಿಂದ ಅವರನ್ನು ಗೌರವಿಸಲಾಯಿತು.










