ವೇಣೂರು: ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಕಾಲೇಜಿನ ಶಾಲಾ ಸಂಸ್ಥಾಪಕ ಗಿರೀಶ್ ಕೆ.ಹೆಚ್. ಮತ್ತು ಶಾಲಾ ಸಂಚಾಲಕ ಅಶ್ವಿತ್ ಕುಲಾಲ್ ಅವರ ಮಾರ್ಗದರ್ಶನದಲ್ಲಿ, ಒಂದನೇ ತರಗತಿ ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳನ್ನು ವೇಣೂರಿನ ಅಂಚೆ ಕಛೇರಿ, ಪೊಲೀಸ್ ಠಾಣೆ ಮತ್ತು ಮಾರ್ಕೆಟ್ ಗೆ ಭೇಟಿ ನೀಡಲಾಯಿತು.
ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಮತ್ತು ಅಲ್ಲಿನ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಲೆಟರ್, ಸ್ಟ್ಯಾಂಪ್ ಗಳ ಬಗ್ಗೆ ಉತ್ತಮ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಲೆಟರ್ ವಿತರಿಸಿದರು. ಹಾಗೆಯೇ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಗಳು ಪೊಲೀಸ್ ಟೋಪಿ, ಆಯುಧಗಳ, ಸಹಾಯವಾಣಿ ನಂಬರ್ ಗಳ ಬಗ್ಗೆ ವಿವರವಾದ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ನೀಡಿರುತ್ತಾರೆ.
ಅದೇ ರೀತಿ ವೇಣೂರಿನ ಮಾರ್ಕೆಟಿನಲ್ಲಿ ವಿವಿಧ ರೀತಿಯ ತರಕಾರಿ, ಫಲವಸ್ತು, ತಿಂಡಿಗಳು , ಹೂವಿನ ಗಿಡಗಳನ್ನು ನೋಡಿ ಸಂತೋಷಪಟ್ಟರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶುಭ, ಶಿಕ್ಷಕಿ ಭವಾನಿ ದಿವ್ಯ, ಶಿಕ್ಷಕಿ ಸುಪ್ರೀತಾ, ದೈಹಿಕ ಶಿಕ್ಷಕ ಶೈಲೇಶ್, ಶಾಲಾ ವಾಹನದ ಚಾಲಕ ದಯಾನಂದ್ ವಿದ್ಯಾರ್ಥಿಗಳಿಗೆ ಸಹಕರಿಸಿದರು.