ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ My Bharath, ಕೊಣಾಜೆ ಗ್ರಾಮ ಪಂಚಾಯತ್, ಮಂಗಳೂರು ಸಮರ್ಪಣಾ ಪರಿವಾರ ಟ್ರಸ್ಟ್ ಹಾಗೂ ದ.ಕ.ಜಿಲ್ಲಾ ಯುವಜನ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವು ಅ.26ರಂದು ಉಳ್ಳಾಲ ತಾಲೂಕು, ಕೊಣಾಜೆ ಗ್ರಾಮ, ಅಸೈಗೋಳಿ ಬಂಟರ ಭವನದಲ್ಲಿ ನಡೆಯಲಿದೆ.
ಯುವ ಜನೋತ್ಸವದಲ್ಲಿ ಸಾಂಸ್ಕೃತಿಕ ಸ್ಪರ್ಧೆ (ಜನಪದ ನೃತ್ಯ, ಜನಪದ ಗೀತೆ, ಕಥೆ ಬರೆಯುವುದು, ಚಿತ್ರ ಕಲೆ, ಘೋಷಣೆ, ಕವಿತೆ ಬರೆಯವುದು, ಇತ್ಯಾದಿ)ಗಳು ನಡೆಯಲಿದ್ದು, ಭಾಗವಹಿಸುವವರ. ಅ.23 ರಂದು ಸಂಜೆ 5.00ಗಂಟೆಯೊಳಗಾಗಿ ತಮ್ಮ/ತಂಡದ ಹೆಸರು [email protected] ಗೆ ಇಮೇಲ್ ಮೂಲಕ ಅಥವಾ ಖುದ್ದಾಗಿ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು (0824-2451264, 8105100781, 7899266697) ಇವರನ್ನು ಸಂಪರ್ಕಿಸಬಹುದೆಂದು ಇಲಾಖೆಯ ಪ್ರಕಟಣೆ ತಿಳಿಸಿರುವುದಾಗಿ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್ ಬೆಳ್ತಂಗಡಿ ಇವರು ಮಾಹಿತಿ ನೀಡಿರುತ್ತಾರೆ.