ಅರಸಿನಮಕ್ಕಿ: ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಯಕ್ಷಗಾನ ಭಾಗವತ ದಿನೇಶ್ ಅಮ್ಮು ಣ್ಣಾಯ (68ವ) ಅ. 16ರಂದು ನಿಧನರಾದರು.
ಕನ್ಯಾಡಿಯಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ನಿಧನ. ಪ್ರಸ್ತುತ ಕಳೆದ ಕೆಲವು ವರ್ಷಗಳಿಂದ ಹತ್ಯಡ್ಕ ಗ್ರಾಮದ ಹೊಸ್ತೋಟ ಎಂಬಲ್ಲಿ ಕೃಷಿ ಚಟುವಟಿಕೆಗಳೊಂದಿಗೆ ಮನೆ ಮಾಡಿಕೊಂಡಿದ್ದರು.
ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.