






ಬೆಳ್ತಂಗಡಿ: ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್. ಐ. ಟಿ ಗುರುವಾಯನಕೆರೆಯ ಶಶಿರಾಜ್ ಶೆಟ್ಟಿಗೆ ಬುಲಾವ್ ನೀಡಿದೆ. ಆಂಬ್ಯುಲೆನ್ಸ್ ಹೊಂದಿದ್ದ ಹಿನ್ನಲೆಯಲ್ಲಿ ಶಶಿರಾಜ್ ಶೆಟ್ಟಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದು, ಅ.15ರಂದು ವಿಚಾರಣೆಗೆ ಆಗಮಿಸಿದ್ದಾರೆ. 2014ರಿಂದ 2016ರವರೆಗೆ 3 ವರ್ಷ ಆಂಬುಲೆನ್ಸ್ ಹೊಂದಿದ್ದ ಶಶಿರಾಜ್ ಶೆಟ್ಟಿಯವರ ಆಂಬ್ಯುಲೆನ್ಸ್ ನಲ್ಲಿ ಕೆಲ ಶವಗಳ ಸಾಗಾಟ ನಡೆಸಲಾಗಿರುವ ಕಾರಣಕ್ಕೆ ವಿಚಾರಣೆಗೆ ಕರೆದಿರುವುದಾಗಿ ತಿಳಿದುಬಂದಿದೆ.









