ಕಳೆಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಉತ್ಸವ ಸಮಿತಿ ರಚನೆ-ಅಧ್ಯಕ್ಷರಾಗಿ ಪದ್ಮಯ ಗೌಡ, ಕಾರ್ಯದರ್ಶಿಯಾಗಿ ಚಂದ್ರಶೇಖರ ಗೌಡ, ಕೋಶಾಧಿಕಾರಿಯಾಗಿ ಶರತ್ ಮೂಡಾರು ಆಯ್ಕೆ

0

ಕಳೆಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಮತ್ತು ದೈವಗಳ ನೇಮೋತ್ಸವ 2026ರ ಜನವರಿ 22ರಿಂದ 24ರ ವರೆಗೆ ವ್ಯವಸ್ಥಿತವಾಗಿ ನಡೆಸಲು ಆಡಳಿತ ಮಂಡಳಿಯ ನೇತೃತ್ವದಲ್ಲಿ ಉತ್ಸವ ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ಅಧ್ಯಕ್ಷರಾಗಿ ಪದ್ಮಯ ಗೌಡ ಬದ್ಯಡ್ಕ, ಕಾರ್ಯದರ್ಶಿಯಾಗಿ ಚಂದ್ರಶೇಖರ ಗೌಡ ನೆಕ್ಕರಾಜೆ ಮತ್ತು ಕೋಶಾಧಿಕಾರಿಯಾಗಿ ಶರತ್ ಮೂಡಾರು ಅವರನ್ನು ಆಯ್ಕೆ ಮಾಡಲಾಯಿತು. ನೂತನ ಉತ್ಸವ ಸಮಿತಿಗೆ ಅನೇಕ ಊರ ಪರವೂರ ಹಿರಿಯರನ್ನು ಗೌರವ ಸಲಹೆಗಾರರಾಗಿ ಮತ್ತು ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.

ನೂತನ ಉತ್ಸವ ಸಮಿತಿಯು ದೇವಳದ ಅಧ್ಯಕ್ಷ ಕೆ. ಶ್ರೀಧರ್ ರಾವ್, ಕಾರ್ಯದರ್ಶಿ ಕುಸುಮಾಕರ ಕೊತ್ತೋಡಿ, ಕಾರ್ಯದರ್ಶಿ ನಿರಂಜನ್ ಬದಿಮಾರು ಹಾಗೂ ಇತರ ಸದಸ್ಯರ ಸಮ್ಮುಖದಲ್ಲಿ ನಡೆಸಲಾಯಿತು.

LEAVE A REPLY

Please enter your comment!
Please enter your name here