ಗೇರುಕಟ್ಟೆ: ಬೊಳ್ಳುಕಲ್ಲು ಶ್ರೀ ದುರ್ಗಾ ಭಜನಾ ಮಂಡಳಿ ಕುಣಿತ ಭಜನಾ ತರಬೇತಿ ಉದ್ಘಾಟನೆ

0

ಗೇರುಕಟ್ಟೆ: ಬೊಳ್ಳುಕಲ್ಲು ಶ್ರೀ ದುರ್ಗಾ ಭಜನಾ ಮಂಡಳಿ ಹನುಮಾನ್ ನಗರದ ವತಿಯಿಂದ ಭಜನಾ ಮಂಡಳಿಯ ಮಕ್ಕಳಿಗೆ ಕುಣಿತ ಭಜನಾ ತರಬೇತಿ ಕಾರ್ಯಗಾರದ ಉದ್ಘಾಟನೆ ಅ. 9ರಂದು ಭಜನಾ ಮಂಡಳಿಯ ಕಾರ್ಯಾಲಯದಲ್ಲಿ ನಡೆಯಿತು. ತರಬೇತುದಾರರಾಗಿ ಶೈಲೇಶ್ ಓಡೀಲು ಭಾಗವಹಿಸಿದ್ದರು. ಮಂಡಳಿಯ ಅಧ್ಯಕ್ಷ ದಿನೇಶ್ ಗೌಡ ಕಲ್ಕುರ್ಣಿ, ಗೌರವಾಧ್ಯಕ್ಷ ಚೆನ್ನಪ್ಪ ಹೀರ್ಯ, ಕಾರ್ಯದರ್ಶಿ ಲೋಹಿತಾಶ್ವ, ಅರ್ಚಕ ಜಗದೀಶ್ , ಉಪಾಧ್ಯಕ್ಷ ಯಶೋಧರ ಹೀರ್ಯ, ಗೌರವ ಸಲಹೆಗಾರರಾದ ಕೂಸಪ್ಪ ಗೌಡ, ಡಾಕಯ್ಯ ಗೌಡ, ಆನಂದ ಗೌಡ, ಸಂಚಾಲಕ ಯೋಗಿಶ್, ಶೇಖರ್, ಮಕ್ಕಳು, ಪೋಷಕರು ಹಾಗೂ ಭಜಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here