
ಪುದುವೆಟ್ಟು: ಗ್ರಾಮದ ಡೆಚ್ಚಾರು ಶಶಿಧರ ಅವರ ಮನೆಯ ಪಕ್ಕದ ಕಾಡಿನಲ್ಲಿ ಅ. 9ರಂದು ಸಂಜೆಯ ವೇಳೆ ಆನೆ ಕಾಣಿಸಿಕೊಂಡಿತ್ತು. ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಅಧಿಕಾರಿಗಳಾದ ತ್ಯಾಗರಾಜ್ ಹಾಗೂ ಉಪವಲಯ ಅರಣ್ಯ ಅಧಿಕಾರಿ ರವಿಶಂಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಆನೆಯನ್ನು ಓಡಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿದರು