ಧರ್ಮಸ್ಥಳದಲ್ಲಿ ಸೀರೆ ವಿತರಣೆ

0

ಧರ್ಮಸ್ಥಳ: ನವರಾತ್ರಿ ಪ್ರಯುಕ್ತ ಅ. 1ರಂದು ರಾತ್ರಿ ದೇವಸ್ಥಾನದಲ್ಲಿ 2600 ಮುತ್ತೈದೆಯರಿಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸೀರೆಗಳನ್ನು ಪ್ರಸಾದ ರೂಪವಾಗಿ ವಿತರಿಸಿದರು.
ನವರಾತ್ರಿ ಪ್ರಯುಕ್ತ ಸೆ. 22ರಿಂದ ಅ.1ರವರೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

ಪ್ರತಿ ದಿನ ಸಂಜೆ ಗಂಟೆ 6 ರಿಂದ ರಾತ್ರಿ 8 ರವರೆಗೆ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಸಂಗೀತ, ಭಕ್ತಿಗೀತೆ, ವೀಣಾವಾದನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here