ಶ್ರೀ ಮಹಾಭಾರತ ಸರಣಿಯಲ್ಲಿ 100 ನೇ ತಾಳಮದ್ದಳೆ ಚಿತ್ರಾಂಗದ ಕಾಳಗ

0

ಬೆಳ್ತಂಗಡಿ: ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟಿನ ಸ್ವರ್ಣ ಮಹೋತ್ಸವದ ಪ್ರಯುಕ್ತ ನಡೆಸುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ನೂರನೇ ತಾಳಮದ್ದಳೆಯಾಗಿ ಚಿತ್ರಾಂಗದ ಕಾಳಗ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಸುರೇಶ್ ರಾವ್. ಬಿ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ ಅರ್ಥಧಾರಿಗಳಾಗಿ ಭಾಸ್ಕರ ಬಾರ್ಯ(ಭೀಷ್ಮ1) ಶ್ರೀಧರ ಎಸ್ ಪಿ ಕೃಷ್ಣಾಪುರ(ಚಿತ್ರಾಂಗದ 1) ಮಾ. ಸುಶಾಂತ್ (ಚಾರಕ )ಶ್ರುತಿ ವಿಸ್ಮಿತ್(ಸುನೀತಿ ) ಆಶಾ ಕಲ್ಲೂರಾಯ ( ಕಾಂತಿ ವರ್ಮ ) ಅಂಬಾ ಪ್ರಸಾದ ಪಾತಾಳ (ಸೌರಂಭ) ಮಹಾಲಿಂಗೇಶ್ವರ ಭಟ್ ಪೆರಿಯಡ್ಕ (ಸೂರ್ಯಸೇನ) ಜಯರಾಮ ಗೌಡ ನಾಲ್ಗುತ್ತು ( ಚಿತ್ರಾಂಗದ 2) ದಿವಾಕರ ಆಚಾರ್ಯ ಗೇರುಕಟ್ಟೆ ( ಚಿತ್ರಾಂಗದ ಗಂಧರ್ವ ) ಜಯರಾಮ ಭಟ್ ದೇವಸ್ಯ ( ಪಿಂಗಾಕ್ಷ ) ಗೀತಾ ಕುದ್ದಣ್ಣಾಯ (ಭೀಷ್ಮ 2) ಭಾಗವಹಿಸಿದ್ದರು.

ಭಾಗವಹಿಸಿದ ಕಲಾವಿದರಿಗೆ ಮತ್ತು ಸಂಘದ ಸದಸ್ಯರಿಗೆ ಶತಕ ಸಂಭ್ರಮದ ನಿಮಿತ್ತ ಯಕ್ಷಗಾನ ಕವಿ ಅರ್ಥಧಾರಿ ಸೀತಾನದಿ ಗಣಪಯ್ಯ ಶೆಟ್ಟಿ ವಿರಚಿತ ಸನಾತನ ಧರ್ಮಸಾರ ಸಂಗ್ರಹ ಪುಸ್ತಕವನ್ನು ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದ ಸಲಹೆಗಾರ ಜಯರಾಮ ಶೆಟ್ಟಿ ಪಡಂಗಡಿ, ಟಿ. ನಾರಾಯಣ ಭಟ್ ರಾಮಕುಂಜ, ಉಮೇಶ ಶೆಣೈ ರಾಮನಗರ, ಚಂದ್ರಶೇಖರ ಮಡಿವಾಳ ವಿತರಿಸಿದರು.

ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ ಜಿಲ್ಲೆಯಾದ್ಯಂತ ಮಹಾಭಾರತ ಸರಣಿಯ ತಾಳಮದ್ದಳೆಯ ಪ್ರಾಯೋಜಕರು, ಭಾಗವಹಿಸಿದ ಯಕ್ಷಗಾನ ತಂಡಗಳು ಮತ್ತು ಎಲ್ಲಾ ಕಲಾವಿದರನ್ನು ಅಭಿನಂದಿಸಿ ತಾಳಮದ್ದಳೆ ಕ್ಷೇತ್ರದಲ್ಲಿ ಇದೊಂದು ಚಾರಿತ್ರಿಕ ದಾಖಲೆಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here