ಪದ್ಮುಂಜ: ಎಸ್.ಎಸ್.ಎಫ್. ಯೂನಿಟ್ ಕಾರ್ಯಕರ್ತರು ನುಸುರತ್ತುಸ್ಸಿಭಿಯಾನ್ ಮದರಸದ ವಿಧ್ಯಾರ್ಥಿಗಳು ಮುಹಮ್ಮದ್ ಶರೀಖ್ ಹಾಗೂ ರಹೀಸ್ ಪದ್ಮುಂಜ ಅವರು ತುರ್ಕಲಿಕೆಯಲ್ಲಿ ನಡೆದ ಎಸ್.ಎಸ್.ಎಫ್ ರಾಜ್ಯ ಸಾಹಿತ್ಯೋತ್ಸವದಲ್ಲಿ ಅರೆಬಿಕ್ ಕನ್ನಡ ಅನುವಾದ ಹಾಗೂ ಕನ್ನಡ ಕೈ ಬರಹದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು ಇವರನ್ನು ಎಸ್.ಎಸ್.ಎಫ್ ಪದ್ಮುಂಜ ಯೂನಿಟ್ ವತಿಯಿಂದ ಪದ್ಮುಂಜದಲ್ಲಿ ಹಾರ್ದಿಕವಾಗಿ ಸ್ವಾಗತಿಸಿ, ಬೈಕ್ ವಾಹನ ಜಾಥಾದ ಮುಖಾಂತರ ಪದ್ಮುಂಜ ಖಲಂದರ್ ಷಾ ಜುಮ್ಮಾ ಮಸೀದಿಗೆ ಬರಮಾಡಿಕೊಂಡು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎನ್.ಎಸ್. ಮದರಸದ ಅಧ್ಯಾಪಕ ಮುಹಮ್ಮದ್ ಸಫ್ವಾನ್ ಹಿಕಮಿಯವರು ದುಆ ನೆರವೇರಿಸಿದರು. ಎಸ್.ವೈ.ಎಸ್ ನಾಯಕ ಅಬ್ದುಲ್ ರಾಶಿದ್ ಸಅದಿ ಪದ್ಮುಂಜ ಉದ್ಘಾಟಿಸಿದರು. ಜಮಾಅತ್ ಕಾರ್ಯದರ್ಶಿ ಕಾಸಿಂ ಪದ್ಮುಂಜ ಅವರು ಮಾತನಾಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಜಮಾಅತ್ ಅಧ್ಯಕ್ಷ ರಫೀಕ್ ಅಂತರ, ಎಸ್.ವೈ.ಎಸ್. ಅಧ್ಯಕ್ಷ ನಝೀರ್ ಮಲೆಂಗಲ್ಲು, ಎಸ್.ಎಸ್.ಎಫ್. ಉಪಾಧ್ಯಕ್ಷ ಸೈಫುದ್ದೀನ್ ಪದ್ಮುಂಜ, ಕಾರ್ಯದರ್ಶಿ ಅಶ್ಫಖ್, ಕೋಶಾಧಿಕಾರಿ ಮುನೀರ್,
ಜಮಾಅತ್ ಕೋಶಾಧಿಕಾರಿ ಯೂಸುಫ್ ಅಂತರ, ಎಸ್.ಎಸ್.ಎಫ್ ನಾಯಕರಾದ ಸಿರಾಜ್ ಪದ್ಮುಂಜ ಮತ್ತು ನಾಫಿಹ್ ಪದ್ಮುಂಜ ಸೇರಿದಂತೆ ಸಂಘ ಕುಟುಂಬದ ನಾಯಕರು ಉಪಸ್ಥಿತರಿದ್ದರು. ಎಸ್.ಎಸ್.ಎಫ್ ಡಿವಿಷನ್ ಕಾರ್ಯದರ್ಶಿ ನಿಜಾಮುದ್ದೀನ್ ಅವರು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.