ತೋಟತ್ತಾಡಿ: ಅರಂತಬೈಲು ಶ್ರೀ ಉಳ್ಳಾಲ್ತಿ ಭಜನಾ ಮಂದಿರದಲ್ಲಿ 10ನೇ ವರ್ಷದ ನವರಾತ್ರಿ ಭಜನಾ ಕಾರ್ಯಕ್ರಮವು ಸೆ.22ರಂದು ಪ್ರೋ. ಎಸ್. ಪ್ರಭಾಕರ್ ಅವರ ಶುಭಾಶೀರ್ವಾದಗಳೊಂದಿಗೆ ಬೆಂದ್ರಾಳ ಶ್ರೀ ಗೋಪಾಲಕೃಷ್ಣ ಇರ್ವತ್ರಾಯ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಭಜನಾ ಮಂದಿರದ ಅಧ್ಯಕ್ಷ ದಿನೇಶ್ ನಾಯ್ಕ, ಪ್ರಧಾನ ಅರ್ಚಕ ತಿಮ್ಮಪ್ಪ ಪೂಜಾರಿ ಹಾರಗಂಡಿ, ನವರಾತ್ರಿ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ ಕುಡೆಂಚ, ಕಾರ್ಯದರ್ಶಿ ವಿನುತಾ ಡಿ.ಮಜಲು, ಸನತ್ ಕುಮಾರ್, ಲೋಕಯ್ಯ ಸಾಲಿಯಾನ್, ಪ್ರಶಾಂತ್, ದಿವಾಕರ ಪೂಜಾರಿ, ದೇವಕಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಮಿತಾ ಕೆ. ಪೂಜಾರಿ, ಭಜನಾ ಮಂದಿರದ ಸದಸ್ಯರು ಹಾಗೂ ಊರಿನ ಭಕ್ತವೃಂದ ಉಪಸ್ಥಿತರಿದ್ದರು.