ಪ್ರಸನ್ನ ಫಾರ್ಮಸಿ ಕಾಲೇಜಿನಲ್ಲಿ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ

0

ಬೆಳ್ತಂಗಡಿ: ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್ ನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸನ್ನ ಫಾರ್ಮಸಿ ಕಾಲೇಜು, ಬೆಳ್ತಂಗಡಿಯಲ್ಲಿ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ ಸೆ.25ರಂದು ನೆರವೇರಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗುರುರಾಜ ಪಡ್ವೇತನಯ, ಹಿರಿಯ ಫಾರ್ಮಸಿಸ್ಟ್, ಗುರುದೇವಿ ಮೆಡಿಕಲ್ ಉಜಿರೆ ಅವರು ಆಗಮಿಸಿ, ಫಾರ್ಮಸಿಸ್ಟ್ ವೃತ್ತಿಯ ಮಹತ್ವ ಹಾಗೂ ಆರೋಗ್ಯ ಸೇವೆಯಲ್ಲಿ ಅವರ ಅವಿಭಾಜ್ಯ ಪಾತ್ರವನ್ನು ವಿವರಿಸಿದರು.

ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಮಲ್ಲಿಕಾರ್ಜುನ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಡಾ.ರೇಷ್ಮಾ ಜಿ. ಗೌಡ ಕಾರ್ಯದರ್ಶಿ ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್ ಬೆಳ್ತಂಗಡಿ, ಡಾ. ಬಿ.ಕೆ. ಪ್ರಾಶಾಂತ್ ಪ್ರಾಂಶುಪಾಲ ಪ್ರಸನ್ನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಬೆಳ್ತಂಗಡಿ ಹಾಗೂ ಅಖಿಲೇಶ್ ಕೆ. ಪ್ರಾಂಶುಪಾಲ ಪ್ರಸನ್ನ ಐಟಿಐ ಕಾಲೇಜು ಬೆಳ್ತಂಗಡಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಲ್ಲರೂ ಒಟ್ಟಾಗಿ ಔಷಧಶಾಸ್ತ್ರಜ್ಞರ ಪ್ರತಿಜ್ಞಾವಚನ (Pharmacist Oath) ಸ್ವೀಕರಿಸಿದರು. ಅತಿಥಿಗಳ ಪ್ರೇರಣಾದಾಯಕ ಭಾಷಣದಿಂದ ವಿದ್ಯಾರ್ಥಿಗಳಲ್ಲಿ ಫಾರ್ಮಸಿ ವೃತ್ತಿಯ ಬಗ್ಗೆ ಅರಿವು ಹಾಗೂ ಹೊಣೆಗಾರಿಕೆಯ ಭಾವನೆ ಇನ್ನಷ್ಟು ಗಾಢವಾಯಿತು.
ಸಮಾರಂಭವನ್ನು ಪ್ರತೀಕ್ಷಾ ಅವರು ಸಮರ್ಪಕವಾಗಿ ನಿರೂಪಿಸಿದರು. ಅತಿಥಿಗಳಿಗೆ ಹಿಲಾನಾ ಅವರು ಆತ್ಮೀಯ ಸ್ವಾಗತ ಕೋರಿದರು ಮತ್ತು ಕೊನೆಯಲ್ಲಿ ಡಾ. ದೀಕ್ಷಾ ಅವರು ಕೃತಜ್ಞತಾಪೂರ್ವಕ ವಂದನಾ ಪ್ರಸ್ತಾಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here