ನಾರಾವಿ: ಸೂರ್ಯ ಸಂಜೀವಿನಿ ಮಹಿಳಾ ಒಕ್ಕೂಟದ 2024-2025ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಸೆ. 22ರಂದು ಒಕ್ಕೂಟದ ಅಧ್ಯಕ್ಷೆ ಸುಪ್ರೀಯಾ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಒಕ್ಕೂಟದ ಸಿಬ್ಬಂದಿಗಳು ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಿ, LCRP ಪುಷ್ಪ ಅವರು ಬಂದಂತಹ ಎಲ್ಲರನ್ನು ಸ್ವಾಗತಿಸಿ, ಪಂಚಾಯತ್ ಅಧ್ಯಕ್ಷರು ಸದಸ್ಯರು ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ವೇದಿಕೆಯಲ್ಲಿ ಆಸೀನರಾಗಿದ್ದು ಪಂಚಾಯತ್ ಹಾಗೂ ಒಕ್ಕೂಟದ ಅಧ್ಯಕ್ಷರು ದೀಪ ಪ್ರಜ್ವಲಿಸಿದರು.
ಈ ಸಭೆಯನ್ನು ಉದ್ದೇಶಿಸಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್ ಹಿತನುಡಿಗಳನ್ನುಡಿದರು. ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಅವರು ಸಂಜೀವಿನಿ ಯೋಜನೆಯ ಧ್ಯೇಯಾದ್ದೋಶಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. MBK ಅನುಷಾ ಅವರು ವಾರ್ಷಿಕ ವರದಿಯನ್ನು ಹಾಗೂ ಶಾಸನಬದ್ಧ ಲೆಕ್ಕಪರಿಶೋಧನ ವರದಿಯನ್ನು ಮಂಡಿಸಿದರು. ಮಂಡಿಸಿದ ವರದಿಯ ಬಗ್ಗೆ ಸಂಜೀವಿನಿ ಚಪ್ಪಾಳೆಯೊಂದಿಗೆ ಅನುಮೋದನೆ ಪಡೆಯಲಾಯಿತು.

ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಹೀ ಸೇವಾ-ಸ್ವಚ್ಛತೆಯೇ ಸೇವೆ ಪಾಕ್ಷಿಕ 2025ರ ಅಭಿಯಾನದಡಿ NRLM ಸೂರ್ಯ ಸಂಜೀವಿನಿ ಒಕ್ಕೂಟದಿಂದ ಸಂಜೀವಿನಿ ಸಂಘದ ಸದಸ್ಯರಿಗೆ ನಾರಾವಿ ಗ್ರಾಮ ಪಂಚಾಯತ್ ನಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು. ಹಾಗೂ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಒಕ್ಕೂಟದ ಅಧ್ಯಕ್ಷೆ ಸುಪ್ರೀಯಾ ಅವರು ಸಂಜೀವಿನಿ ಯೋಜನೆಯ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಈ ದಿನ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ವಿಜೇತರದವರಿಗೆ ಈ ಸಭೆಯಲ್ಲಿ ಬಹುಮಾನವನ್ನು ವಿತರಿಸಲಾಯಿತು. ಸಭೆಯಲ್ಲಿ ಸಂಜೀವಿನಿಯ ದ್ಯೇಯ ಗೀತೆಯನ್ನು ಹಾಡಲಾಯಿತು. ಹಾಗೂ ಈ ಸಭೆಯಲ್ಲಿ ಸ್ವಸ್ತಿಕ್ ಮಾದಕ ಮುಕ್ತ ಕರ್ನಾಟಕ ಪ್ರತಿಜ್ಞಾ ವಿಧಿಯನ್ನು ವಾಚಿಸಿದರು. LCRP ಸುಭೀಕ್ಷಾ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಬಿ.ಸಿ ಸಖಿ ಹರೀನಾಕ್ಷಿ ಅವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.