ಬೆಳ್ತಂಗಡಿ: ಮದ್ದಡ್ಕ ಸುನ್ನೀ ಸೆಂಟರ್ ಸಭಾಂಗಣದಲ್ಲಿ ಕರ್ನಾಟಕ ಮುಸ್ಲಿಮ್ ಜಮಾತ್ ಗುರುವಾಯನಕೆರೆ ಸರ್ಕಲ್ ಮತ್ತು ಸರ್ಕಲ್ ವ್ಯಾಪ್ತಿಯ ಯೂನಿಟ್ ಗಳ ಸಂಯುಕ್ತ ಆಶ್ರಯದಲ್ಲಿ ಇಡೀ ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ವಿಶ್ವ ಪ್ರವಾದಿ ಮಹಮ್ಮದ್ ಮುಸ್ತಫ(ಸ ಅ) ರವರ 1500ನೇ ವರ್ಷದ ಜನ್ಮದಿನಾಚರಣೆಯ ಪ್ರಯುಕ್ತ ಸೆ.20ರಂದು ಈದ್ ಮೀಲಾದ್ ಸೌಹಾರ್ಧ ಸಂಗಮ, ಗೌರವಾರ್ಪಣೆ, ಸ್ವಲಾತ್ ಮಜ್ಲಿಸ್, ಸದಸ್ಯತ್ವ ಕಾರ್ಡ್ ವಿತರಣೆ ಕಾರ್ಯಕ್ರಮ ನಡೆಯಿತು.
ಹಾಫಿಳ್ ಮುಈನುದ್ದೀನ್ ರಝ್ವಿ ಅಲ್ ಅಮ್ಜದಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು. ಅಬ್ದುಲ್ ಹಮೀದ್ ಅಲ್ – ಫುರ್ಖಾನಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್.ಎಂ.ಕೋಯಾ ತಂಙಳ್ ದುವಾ ನೆರವೇರಿಸಿದರು.ವಿವಿಧ ಕ್ಷೇತ್ರಗಳ ಗೋಪಿನಾಥ್ ನಾಯಕ್ ಚಂದ್ರಹಾಸ ಕೇದೆ, ಅಬ್ದುಲ್ ಕರೀಮ್ ಗೇರುಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಯಾಕೂಬ್ ಮುಸ್ಲಿಯಾರ್, ಅಶ್ರಫ್ ಎ, ಇಬ್ರಾಹಿಂ ಕಕ್ಕಿಂಜೆ ಉಪಸ್ಥಿತರಿದ್ದರು. ಎನ್.ಎಸ್. ಉಮ್ಮರ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಬ್ಬೋನು ಮದ್ದಡ್ಕ ದನ್ಯವಾದವಿತ್ತರು.