ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ( ಜಾತಿ ಗಣತಿ ) ಯನ್ನು ನಡೆಸಲು ಪ್ರಾರಂಭಿಸಿರುವ ಹಿನ್ನೆಲೆ ಈ ಜಾತಿ ಗಣತಿಯ ಸಂದರ್ಭದಲ್ಲಿ ಬಂಟರು ತಮ್ಮ ಜಾತಿಯನ್ನು ಹೇಗೆ ನಮೂದಿಸಬೇಕು ಎಂಬ ಬಗ್ಗೆ ಇದ್ದಂತಹ ಗೊಂದಲಗಳನ್ನು ನಿವಾರಿಸುವ ಉದ್ದೇಶದಿಂದ ಸೆ.18ರಂದು ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಅಧಿಕೃತ ಮಾರ್ಗದರ್ಶನವನ್ನು ನೀಡಲಾಗಿದೆ.
ಸಮೀಕ್ಷೆಗೆ ಬರುವವರ ಮೊಬೈಲ್ ಆಪ್ ನಲ್ಲಿ ಇರುವಂತಹ 8ನೇ ಕಾಲಂ ನಲ್ಲಿ ಧರ್ಮ ಎಂದು ಇರುವ ಜಾಗದಲ್ಲಿ ಹಿಂದೂ ಎಂದು ನಮೂದಿಸಬೇಕು ಹಾಗೂ 9ನೆೇ ಕಾಲಂ ನಲ್ಲಿ ಜಾತಿ ಎಂದು ಇರುವ ಜಾಗದಲ್ಲಿ ಕೋಡ್ ಸಂಖ್ಯೆ ( A-0227 ) ರಂತೆ BUNT ಎಂದು ನಮೂದಿಸಬೇಕು.
11 ನೇ ಕಾಲಂನಲ್ಲಿ ಇರುವ ಸಮಾನಾರ್ಥಕ ( ಪರ್ಯಾಯ ) ಹೆಸರು ಎಂದು ಇರುವ ಜಾಗದಲ್ಲಿ ಕೋಡ್ ಸಂಖ್ಯೆ (A-1026 ) ರಂತೆ NADAVA ಎಂದು ನಮೂದಿಸಬೇಕು ಎಂದು ತಿಳಿಸಲಾಗಿದೆ. ಸರಕಾರ ರೂಪಿಸಿರುವ ಮೊಬೈಲ್ ಆಪ್ ನಲ್ಲಿ 11ನೇ ಕಾಲಂನಲ್ಲಿ ನಾಡವ ( NADAVA ) ಎಂಬ ಹೆಸರನ್ನು ಕಡ್ಡಾಯವಾಗಿ ನಮೂಯಿಸಬೇಕು. ಶಿಕ್ಷಣ, ಉದ್ಯೋಗ, ಇತ್ಯಾದಿಗಳಲ್ಲಿ ರಾಜ್ಯ ಸರಕಾರದ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ನಾಡವ ಅನ್ನುವ ಹೆಸರನ್ನು ಸಮೀಕ್ಷೆಯಲ್ಲಿ ಸೇರಿಸುವುದು ಅತೀ ಅಗತ್ಯವಾಗಿರುತ್ತದೆ ಎಂದು ಹೇಳಲಾಗಿದೆ.