ಅಳದಂಗಡಿ: ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆ ಅಳದಂಗಡಿ ಕೆದ್ದು ಜಂಕ್ಷನ್ ಗೆ ನಾಲ್ಕು ಬ್ಯಾರಿಕೇಡ್ ಕೊಡುಗೆಯಾಗಿ ನೀಡಿದೆ. ಸಂಘಟನೆ ಮತ್ತು ದಾನಿಗಳ ಸಹಕಾರದೊಂದಿಗೆ ಸುಗಮ ಸಂಚಾರಕ್ಕಾಗಿ ನಾಲ್ಕು ಬ್ಯಾರಿಕೇಡ್ ಗಳನ್ನು ಕೆದ್ದು ಜಂಕ್ಷನ್ ನ ಬಳಿ ಸೆ.15ರಂದು ಇರಿಸಲಾಯಿತು.
ಸಂಘಟನೆಯ ಗೌರವಾಧ್ಯಕ್ಷ ನಿವೃತ್ತ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್, ಅಳದಂಗಡಿ ಸತ್ಯದೇವತಾ ಸನ್ನಿದಾನದ ಆಡಳಿತ ಮೋಕ್ತೇಸರ ಶಿವಪ್ರಸಾದ್ ಅಜಿಲ ಮತ್ತು ಕೆ.ಎಸ್. ಎನರ್ಜಿ ಸ್ಟೇಷನ್ ಮಾಲಕ ಸುಕೇಶ್ ಕೆದ್ದು, ಲೋಕೇಶ್ ಕುತ್ಲೂರು ಹಾಗೂ ಸಂಘಟನೆಯ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿಸಲಾಯಿತು.

ಸಂಘಟನೆಯ ಗೌರವ ಅಧ್ಯಕ್ಷ ಶಿವಪ್ರಸಾದ್ ಅಜಿಲರು ಮಾತನಾಡಿ ” ಸದಾ ಸಮಾಜಮುಖಿ ಚಿಂತನೆಯ ಯುವಕರು ಒಗ್ಗೂಡಿ ಮಾಡುವ ಸಮಾಜಮುಖಿ ಕೆಲಸ ಇತರರಿಗೆ ಮಾದರಿ”ಎಂದರು. ಕೆ.ಎಸ್. ಎನರ್ಜಿ ಸ್ಟೇಷನ್ ಮಾಲಕ ಸುಕೇಶ್ ಅವರು ಮಾತನಾಡಿ “ಕೆದ್ದು ಜಂಕ್ಷನ್ ತೀರಾ ಕಡಿದಾದ ತಿರುವು ಇರುವುದರಿಂದ ಶಾಲಾ ಮಕ್ಕಳು ಸಾರ್ವಜನಿಕರಿಗೆ ರಸ್ತೆ ಡಾಟಲು ಸಮಸ್ಯೆ ಆಗುತಿದ್ದು ಇದು ಉತ್ತಮ ಕಾರ್ಯಕ್ರಮ ಎಂದು ಸಂಘಟನೆಯ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಶುಭ ಹಾರೈಸಿದರು. ಶಿರ್ಲಾಲು ಬಿಲ್ಲವ ಸಂಘದ ಅಧ್ಯಕ್ಷ ಸದಾಶಿವ ಊರ, ಟೈಲರಿಂಗ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು. ಸಂಘಟನೆಯ ಅಧ್ಯಕ್ಷ ದೇವದಾಸ್ ಸಾಲ್ಯಾನ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ವಾಸು ಮುಳ್ಳಡ್ಕ ಧನ್ಯವಾದ ಸಲ್ಲಿಸಿದರು.