ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ ಮಂಗಳೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು, ಉತ್ತರವಲಯ ಹಾಗೂ ಲೇಡಿಹಿಲ್ ವಿಕ್ಟೋರಿಯಾ ಪ್ರೌಢ ಶಾಲೆ, ಊರ್ವ ಮಂಗಳೂರು ಇವರ ಸಹಯೋಗದಲ್ಲಿ 2025-26ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಬಾಲಕ – ಬಾಲಕಿಯರ ಈಜು ಸ್ಪರ್ಧೆಯಲ್ಲಿ ಮೂಡಬಿದಿರೆ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು 1ಚಿನ್ನ, 2ಬೆಳ್ಳಿ, 5ಕಂಚಿನ ಪದಕಗಳೊಂದಿಗೆ ಒಟ್ಟು 8 ಪದಕಗಳನ್ನು ಗಳಿಸಿದರು. ಈ ಮೂಲಕ ಮುಂದೆ ನಡೆಯುವ ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಳ್ವಾಸ್ ಶಾಲೆಯಿಂದ ಇಬ್ಬರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಫಲಿತಾಂಶ: ಅಭಿಷೇಕ್ 400 ಮೀ. ವೈಯಕ್ತಿಕ ಈಜು (ಪ್ರಥಮ ಸ್ಥಾನ), 50 ಮೀ. ಬಟರ್ ಫ್ಲೈ (ತೃತೀಯ ಸ್ಥಾನ), 100 ಮೀ. ಫ್ರೀ ಸ್ಟೈಲ್ (ದ್ವಿತೀಯ ಸ್ಥಾನ), ಅಭಿನವ್ ಕೃಷ್ಣಎಚ್ ಆರ್. 100 ಮೀ. ಬ್ಯಾಕ್ ಸ್ಟೋಕ್ (ದ್ವಿತೀಯ ಸ್ಥಾನ), ವರ್ಚಸ್ವಿ ಎ.ಪಿ. 50 ಮೀ. ಫ್ರೀ ಸ್ಟೈಲ್ (ತೃತೀಯ ಸ್ಥಾನ), 50 ಮೀ ಬ್ಯಾಕ್ ಸ್ಟೋಕ್ (ತೃತೀಯ ಸ್ಥಾನ), ಆಯುಷ್ ಪ್ರವೀಣ್ 100 ಮೀ. ಬ್ಯಾಕ್ ಸ್ಟೋಕ್ (ತೃತೀಯ ಸ್ಥಾನ), 100 ಮೀ. ಫ್ರೀ ಸ್ಟೈಲ್ (ತೃತೀಯ ಸ್ಥಾನ). ವಿಜೇತರಾದ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರವರು ಅಭಿನಂದಿಸಿದ್ದಾರೆ.