ಬೆಳ್ತಂಗಡಿ: ಜೆಸಿಐ ಮತ್ತು ಪೊಲೀಸ್ ಇಲಾಖೆ ಅವರ ಸಹಭಾಗಿತ್ವದಲ್ಲಿ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಡ್ರಗ್ಸ್ ತಡೆ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ನೃತ್ಯ ಕಾರ್ಯಕ್ರಮವನ್ನು ಸೆ.9ರಂದು ಆಯೋಜಿಸಲಾಯಿತು.
ಜೆಸಿಐ ಬೆಳ್ತಂಗಡಿಯ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಅವರ ನಾಯಕತ್ವದಲ್ಲಿ, ಪ್ರಶಾಂತ್ ಲಾೖಲ ಅವರ ನಿರ್ದೇಶನದಲ್ಲಿ, ತ್ರಿಶಾ ಅವರ ಸಂಗೀತ ಸಂಯೋಜನೆ, ಸುದೀಪ್ ಸಾಲ್ಯಾನ್ (ಧ್ವನಿ ನ್ಯೂಸ್) ಅವರ ವಿಡಿಯೋ ಚಿತ್ರೀಕರಣ ಮತ್ತು ಸಂಕಲನ, ರುಡ್ಸೆಟ್ ಉಜಿರೆ ಹಾಗೂ ವಾಣಿ ವಿದ್ಯಾಸಂಸ್ಥೆ ಬೆಳ್ತಂಗಡಿ ಅವರ ಸಹಕಾರದೊಂದಿಗೆ ಈ ಕಾರ್ಯಕ್ರಮ ರೂಪುಗೊಂಡಿತು.
ಸುಮಾರು 300ಕ್ಕೂ ಹೆಚ್ಚು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೆಸಿಐ ಬೆಳ್ತಂಗಡಿಯ ಧ್ವಜಾರೋಹಣ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನೆರವೇರಿತು.
ಘಟಕದ ಪೂರ್ವಾಧ್ಯಕ್ಷ ಚಿದಾನಂದ್ ಇಡ್ಯಾ, ಸ್ವರೂಪ್ ಶೇಖರ್ ನಾರಾಯಣ ಶೆಟ್ಟಿ, ಉಪಾಧ್ಯಕ್ಷ ಸುದೀರ್ ಕೆ.ಎನ್., ಮಮಿತಾ ಸುಧೀರ್, ಪ್ರೀತಮ್ ಶೆಟ್ಟಿ, ಕಾರ್ಯದರ್ಶಿ ಪ್ರಮೋದ್ ಕೆ., ಜೆಸಿ ಸಪ್ತಾಹ ನಿರ್ದೇಶಕ ರಕ್ಷಿತ್ ಬಂಗೇರ ಅಂಡಿಂಜೆ, ಮಹಿಳಾ ಜೆಸಿ ಸಂಯೋಜಕಿ ಚಿತ್ರಪ್ರಭಾ, ಸದಸ್ಯರಾದ ರಾಘವೇಂದ್ರ ಪೂಜಾರಿ ಹಾಗೂ ರಜತ್ ಮೋರ್ತಾಜೆ ಉಪಸ್ಥಿತರಿದ್ದರು. ಸಾರ್ವಜನಿಕರೂ ಸಹಕಾರ ನೀಡಿದರು.