ಬೆಳ್ತಂಗಡಿಯಲ್ಲಿ ಪತಂಜಲಿ ಉಚಿತ ಯೋಗ ತರಗತಿ ಉದ್ಘಾಟನೆ

0

ಬೆಳ್ತಂಗಡಿ: ವಿಶ್ವದಲ್ಲಿ ಸೆ.10ರಂದು ವೈದ್ಯಕೀಯ ಕ್ಷೇತ್ರವು ಕ್ಷಿಪ್ರ ಬದಲಾವಣೆ ಹೊಂದುತ್ತಿದೆ. ಆಧುನಿಕ ಜಗತ್ತಿನಲ್ಲಿ ಹೊಸ ಹೊಸ ಮಾನಸಿಕ ಕಾಯಿಲೆಗಳ ನಿಯಂತ್ರಣಕ್ಕೆ ಯೋಗ ಶಿಕ್ಷಣ ಪರಿಣಾಮಕಾರಿ ಎಂದು ಯೋಗದ ಮಹತ್ವದ ಕುರಿತು ಬೆಳ್ತಂಗಡಿಯ ವೈದ್ಯ ಡಾ.ಸುಧೀರ್ ಪ್ರಭು ಹೇಳಿದರು.

ಇತ್ತೀಚೆಗೆ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ನಡೆದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ 48 ದಿನಗಳ ಉಚಿತ ಯೋಗ ತರಗತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಸ್. ಪಿ.ವೈ.ಎಸ್.ಎಸ್. ಜಿಲ್ಲಾ ಸಂಚಾಲಕ ನಾರಾಯಣ ಕಳೆದ 45 ವರ್ಷಗಳಿಂದ ಸಮಿತಿ ಬೆಳೆದು ಬಂದ ದಾರಿ, ಉದ್ದೇಶ, ಸಾಧನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಇಲ್ಲಿ ನೀಡುವ ಶಿಕ್ಷಣ ಕೇವಲ ಆಸನ ಅಭ್ಯಾಸಗಳ ಕಸರತ್ತು ಅಲ್ಲ, ಅದು ಜೀವನಶೈಲಿ. ಸಂಶೋಧನಾತ್ಮಕವಾಗಿ ರೂಪಿಸಿದ ಪಠ್ಯಕ್ರಮದಂತೆ ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ಬಂಧು ಸಂತೋಷ ಎಸ್. ಪಿ. ವೈ .ಎಸ್. ಎಸ್. ನೀಡುತ್ತಿರುವ ಪಂಚಮುಖಿ ಶಿಕ್ಷಣದಿಂದ ತಮ್ಮ ಶಾರೀರಿಕ ಮಾನಸಿಕ ಕೌಟುಂಬಿಕ ಸಾಮಾಜಿಕ ಆಧ್ಯಾತ್ಮಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ಹೇಳಿದರು. ಯೋಗ ಬಂಧುಗಳಾದ ಅಶ್ವಿನಿ ಪ್ರಾರ್ಥಿಸಿ, ಕೋಮಲ ಸ್ವಾಗತಿಸಿದರು. ಗಣೇಶ್ ಪ್ರಸಾದ್ ಅವರು ಹೊಸ ಯೋಗ ಬಂಧುಗಳಿಗೆ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಶಿಕಲಾ ನಡೆಸಿಕೊಟ್ಟರು. ಯೋಗ ಶಿಕ್ಷಕಿ ಪ್ರೇಮಲತಾ ಗಣೇಶ್ ಸಹಕರಿಸಿದರು. ತಾಲೂಕು ಜಿಲ್ಲೆ ಹಾಗೂ ಪ್ರಾಂತ ಪ್ರಮುಖರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

LEAVE A REPLY

Please enter your comment!
Please enter your name here