ಸೆ.13: ಶ್ರವಣಬೆಳಗೊಳದ ಮಹಾಸ್ವಾಮಿಜಿ ಬೆಳ್ತಂಗಡಿಗೆ ಪುರ ಪ್ರವೇಶ

0

ಬೆಳ್ತಂಗಡಿ: ಜೈನ ಧರ್ಮೀಯರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶ್ರವಣಬೆಳಗೊಳದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟಾಚಾರ್ಯವರ್ಯ ಮಹಾಸ್ವಾಮಿಗಳು, ಶ್ರೀ ಜೈನಮಠ, ಶ್ರವಣಬೆಳಗೊಳ ಅವರು ಸೆ. 13ರಂದು ಬೆಳ್ತಂಗಡಿಯ ಇತಿಹಾಸ ಪ್ರಸಿದ್ಧವಾದ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಇಲ್ಲಿಗೆ ಬೆಳಗ್ಗೆ 9ಗೆ ಪುರ ಪ್ರವೇಶ ಮಾಡಲಿದ್ದಾರೆ.

ಇವರನ್ನು ಸಮಾಜ ಬಾಂಧವರು ಭವ್ಯತೆಯಿಂದ ಸ್ವಾಗತಿಸಲಿದ್ದಾರೆ. ಸದ್ರಿ ದಿನದಂದು ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬಸದಿಯಲ್ಲಿ ನಡೆಯಲಿರುವ ಚಂದನ ಷಷ್ಟಿಯ ಉದ್ಯಾಪನೆಯಲ್ಲಿದಿವ್ಯ ಪಾವನ ಸಾನಿಧ್ಯ ವಹಿಸಿಕೊಂಡು ಮಾರ್ಗದರ್ಶನ ನೀಡಲಿರುವರು. ಬೆಳ್ತಂಗಡಿ ಬಸದಿಯ ಪ್ರಧಾನ ಅರ್ಚಕರಾದ ಕೆ. ಜಯರಾಜ್ ಇಂದ್ರರವರ ತಂಡದವರು ಪೂಜಾ ವಿಧಿ ವಿಧಾನ ನಡೆಸಿಕೊಡಲಿದ್ದಾರೆ.

ಆ ಬಳಿಕ ಮಧ್ಯಾಹ್ನ ವಿಶ್ವಶಾಂತಿ, ವಿಶ್ವದೆಲ್ಲೆಡೆ ನೆಮ್ಮದಿ, ವಿಶ್ವ ಸುಬೀಕ್ಷೆಗಾಗಿ ಅಪರಾಹ್ನ 2 ಗಂಟೆಗೆ *ದಿವ್ಯ ಮಂಗಲ ಪ್ರವಚನ ಮಾಡಲಿರುವರು. ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಜಯವರ್ಮರಾಜ ಬಳ್ಳಾಲ್ ರವರು ವಹಿಸಿಕೊಳ್ಳಲಿದ್ದಾರೆ. ಈ ಪುಣ್ಯ ಮಹಾಪರ್ವದಲ್ಲಿ ಸರ್ವರೂ ಭಾಗವಹಿಸುವಂತೆ ಸಂಘಟಕರು ವಿನಂತಿಸಿರುತ್ತಾರೆ.

LEAVE A REPLY

Please enter your comment!
Please enter your name here