ಮೊಗ್ರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ಮೈಸೂರು ನಡೆಸಿದಂತಹ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಮೊಗ್ರು ಗ್ರಾಮ ಪರಕ್ಕಾಜೆ ನಿವಾಸಿ ನೇಹಾ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ.
ಪುತ್ತೂರಿನ ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್ ಅವರ ಶಿಷ್ಯೆ, ಶ್ರೀ ಶಾರದಾ ಕಲಾ ಶಾಲೆ ಮುರ(ಮೊಗ್ರು) ಶಾಖೆಯ ನೃತ್ಯ ಶಿಕ್ಷಕಿ ವಿದುಷಿ ಸುರಕ್ಷಾ ಭಟ್ ಅವರ ಶಿಷ್ಯೆಯಾಗಿರುವ ನೇಹಾ, ಶ್ರೀ ಭಾರತೀ ವಿದ್ಯಾ ಸಂಸ್ಥೆ ಉರುವಾಲು ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ. ಕುಶಾಲಪ್ಪ ಗೌಡ ಮತ್ತು ವಸಂತಿ ದಂಪತಿಗಳ ಪುತ್ರಿಯಾಗಿರುತ್ತಾರೆ.