ಬೆಳ್ತಂಗಡಿ: ಮಡಂತ್ಯಾರು ಜೆಸಿಐಯಿಂದ ನೀಡಲಾಗುವ ಉದ್ಯಮ ರತ್ನ ಪ್ರಶಸ್ತಿಗೆ ಅವಿನಾಶ್ ಕುಲಾಲ್ ಮಾಣೂರು ಅವರು ಆಯ್ಕೆಯಾಗಿದ್ದಾರೆ. ಇವರು ಸಣ್ಣ ವಯಸ್ಸಿನಲ್ಲೇ ಕುಲಾಲ ಯುವವೇದಿಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಮನ ಗ್ರೂಪ್ ಆಫ್ ಇಂಡಸ್ಟ್ರಿಸ್ ಎಂಬ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದಾರೆ. ಹಾಗೂ ಕಂಬಳ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಯುವ ಉದ್ಯಮಿಯಾಗಿದ್ದಾರೆ.