ಬೆಳ್ತಂಗಡಿ: ತಾಲೂಕಿನ ಉಜಿರೆಯಲ್ಲಿರುವ ಸರ್ಕಾರಿ ಪಶು ಆಸ್ಪತ್ರೆಯ ಪ್ರಭಾರ ಪಶು ವೈದ್ಯರಾಗಿ ಡಾ. ರವಿಕುಮಾರ್, ಈ ಹಿಂದೆ ಪ್ರಭಾರದಲಿದ್ದ ಬೆಳ್ತಂಗಡಿ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಯತೀಶ್ ಅವರಿಂದ ಸೆ. 4ರಂದು ಅಧಿಕಾರ ವಹಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ.
ಉಜಿರೆ ಸರ್ಕಾರಿ ಪಶು ಆಸ್ಪತ್ರೆಯು ಉಜಿರೆ ಹಾಗೂ ಬೆಳಾಲು ವ್ಯಾಪ್ತಿಗೆ ಒಳಪಟ್ಟು ಎರಡು ಉಪ ಕೇಂದ್ರಗಳ ಗ್ರಾಮಗಳಾದ ನಡ, ಕನ್ಯಾಡಿ, ನಾವೂರು, ಮುಂಡಾಜೆ, ಕಡಿರುದ್ಯಾವರ ಹಾಗೂ ಕಲ್ಮಂಜ ಗ್ರಾಮಗಳನ್ನು ಒಳಗೊಂಡಿದ್ದು ಸುಮಾರು 10 ಹಾಲು ಉತ್ಪಾದಕ ಸಹಕಾರಿ ಸಂಘಗಳನ್ನು ಒಳಗೊಂಡಿದೆ.
ಡಾ. ರವಿ ಕುಮಾರ್ ಅವರು ಮೂಲತಃ ಕೋಲಾರ ಜಿಲ್ಲೆಯವರಾಗಿದ್ದು 2006ರಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಪಶು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಿ 2024 ರಿಂದ ಸಹಾಯಕ ನಿರ್ದೇಶಕರಾಗಿ ಭಢ್ತಿಗೊಂಡಿರುತ್ತಾರೆ.
ಕಳೆದ ನಾಲ್ಕು ವರ್ಷಗಳಿಂದ ಪಶು ಆಸ್ಪತ್ರೆ ಉಜಿರೆಯಲ್ಲಿ ಪಶು ವೈದ್ಯರ ಹುದ್ದೆ ಖಾಲಿ ಇದ್ದು ವ್ಯಾಪ್ತಿಗೆ ಒಳಪಡುವ ಗ್ರಾಮಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪಗಳು ಬರುತ್ತಿದ್ದು ಇದೀಗ ಡಾ. ರವಿ ಕುಮಾರ್ ರವರನ್ನು ಪ್ರಭಾರ ವೈದ್ಯರಾಗಿ ನೇಮಕ ಮಾಡಿದ್ದು, ಗೋ ಪಾಲಕರಿಗೆ ಕೊಂಚ ಸಂತೋಷವನ್ನುಂಟು ಮಾಡಿದೆ. ಪಶು ಸಂಗೋಪನಾ ಇಲಾಖೆಯ ಮಹತ್ವಕಾಂಕ್ಷಿ ಯೋಜನೆಗಳಾದ ಜಾನುವಾರು ವಿಮೆ, ಅನುಗ್ರಹ ಯೋಜನೆ, ಹಾಲಿನ ಸಬ್ಸಿಡಿ, ಜಾನುವಾರುಗಳ ಲಸಿಕಾ ಕಾರ್ಯಕ್ರಮ ಹಾಗೂ ಚಿಕಿತ್ಸೆಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರು ಡಾ. ರವಿ ಕುಮಾರ್ ಅವರನ್ನು ಸಂಪರ್ಕಿಸಬಹುದು.