ಅರಸಿನಮಕ್ಕಿ: ಉಪ್ಪಾರಡ್ಕ ಸಮೀಪದ ಕಡ್ತಿಮಾರ್, ಪಡ್ಡಾಯಿಬೆಟ್ಟು, ಕೋಡಿಯಡ್ಕ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಒಂಟಿ ಸಲಗವೊಂದು ಓಡಾಡುತ್ತಿದ್ದು ಸೆ. 8ರಂದು ಈ ಭಾಗದ ಅನೇಕ ತೋಟಗಳಿಗೆ ದಾಳಿ ಮಾಡಿ ತೆಂಗು, ಅಡಿಕೆ, ಬಾಳೆ ಸಹಿತ ಕೃಷಿಗೆ ಅಳವಡಿಸಿದ ಪೈಪ್ ಲೈನ್ ಗಳು ನಾಶವಾಗಿದೆ.

ಅದಲ್ಲದೆ ಇನ್ನೇನು ಕಟಾವಿಗೆ ತಯಾರಾಗಿದ್ದ ಮರೆಗೆಣಸಿನ ತೋಟಕ್ಕೂ ದಾಳಿ ಮಾಡಿ ಸಂಪೂರ್ಣ ನಾಶ ಮಾಡಿದೆ ಎಂದು ಈ ಭಾಗದ ನಿವಾಸಿಗಳು ಸುದ್ದಿ ನ್ಯೂಸ್ ಗೆ ತಿಳಿಸಿದ್ದು, ಅದಲ್ಲದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅವರು ಇನ್ನಷ್ಟೇ ಸ್ಥಳಕ್ಕೆ ಆಗಮಿಸಬೇಕಿದೆ ಎಂದು ಮಾಹಿತಿ ಲಭ್ಯವಾಗಿದೆ.