ಮಾವಿನಕಟ್ಟೆ: ಸಾಂತಾ ಆನ್ನಾ ಮಾತೆಯ ಚಚ್೯ ನಲ್ಲಿ ಸಂಭ್ರಮದ ಸೆ.8ರಂದು ಮೊಂತಿ (ತೆನೆ) ಹಬ್ಬವನ್ನು ಆಚಾರಿಸಲಾಯಿತು. ಅದಕ್ಕೆ ಪೂರ್ವಕವಾಗಿ 9 ದಿನಗಳ ಕಾಲ ನಡೆಯುವ ನೊವೆನಾ ಪ್ರಾರ್ಥನೆಯು ಸೆ.7ರಂದು ಕೊನೆಗೊಂಡಿತು. ಮೊಂತಿ ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತರು ತಮ್ಮ ವ್ಯಾಪ್ತಿಯ ಚರ್ಚ್ ಗಳಲ್ಲಿ ದಿವ್ಯ ಬಲಿ ಪೂಜೆಯನ್ನು ಪಾಲ್ಗೊಂಡು ತಮ್ಮ ಮನೆಗಳಲ್ಲಿ ಹೊಸ ಅಕ್ಕಿ ಕುಟುಂಬ ಸಮೇತರಾಗಿ ಊಟವನ್ನು ಇಂದು ಸವಿಯಲಿದ್ದಾರೆ.
9 ದಿನಗಳ ನೊವೆನಾ ಆಚರಣೆಯಲ್ಲಿ ಪ್ರಾರ್ಥನೆ ಧ್ಯಾನ ಭಕ್ತಿಗೀತೆಗಳು ಹಾಗೂ ವಿಶೇಷ ಉದ್ದೇಶಕ್ಕಾಗಿ ಪ್ರಾರ್ಥನೆಯ ಸಲ್ಲಿಸಲಾಯಿತು ಮೊಂತಿ ಹಬ್ಬದ ಕನ್ಯಾ ಮರಿಯಮ್ಮನಿಗೆ ಪ್ರಾರ್ಥನೆ ಪ್ರಧಾನ ದಿವ್ಯ ಬಲಿ ಪೂಜೆಯನ್ನು ಫಾ.ಬರ್ನಾಡ್ ರೋಡ್ರಿಗಸ್ ತೆನೆ ಆಶೀರ್ವದಿಸಿ ಸಂದೇಶ ನೀಡಿದರು. ಶಿವಮೊಗ್ಗ ಧರ್ಮ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸುವ ಫಾ. ಫೆಡ್ರಿಕ್ ಕೋರೆಯ ಸಹಕರಿಸಿದರು. ವಾಹನಗಳ ಆಶೀರ್ವಚನ ಹಬ್ಬದ ಪ್ರಯುಕ್ತ ಕುಟುಂಬಗಳಿಗೆ ತೆನೆ ವಿತರಣೆ ಹಾಗೂ ಪುಷ್ಪಾರ್ಪಣೆ ಸಲ್ಲಿಸಿದ್ದ ಪುಟಾಣಿ ಮಕ್ಕಳಿಗೆ ಹಾಗೂ ಎಲ್ಲರಿಗೂ ಕಬ್ಬು ಹಾಗೂ ಸಿಹಿ ತಿಂಡಿ. ಸ್ತ್ರೀ ಸಂಘದವರು ವಿತರಿಸಲಾಯಿತು.
ಆರ್ಥಿಕ ಧಾನ ಸಹಾಯ ಮಾಡಿದ ದಾನಿಗಳಿಗೆ ಮೇಣದಬತ್ತಿ ವಿತರಿಸಿ, ಗೌರವಿಸಲಾಯಿತು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿ ಆರ್ಥಿಕ ಸಮಿತಿ ಸದಸ್ಯರು ಗುರಿಕಾರರು ಚರ್ಚ್ ಪಾಲನಾ ಮಂಡಳಿ ಸದಸ್ಯರು ಮುಖಂಡರು ಸಹಕರಿಸಿದರು.