ವೇಣೂರು: ಪಡ್ಡoದಡ್ಕ ನೂರುಲ್ ಹುಧಾ ಮಸೀದಿಯಿಂದ 1500ನೇ ಈದ್ ಮಿಲಾದ್ ಆಚರಿಸಲಾಯಿತು. ಆರಂಭದಲ್ಲಿ ರಾಲಿಗೆ ಖತೀಬ್ ಜನಾಬ್ ಕಲಂದರ್ ಶಾಫಿ ಬಾಖವಿ ದುವಾ ಪ್ರಾರ್ಥನೆ ಮಾಡಿ ಚಾಲನೆ ನೀಡಿದರು. ನಂತರ ಮೌಲೂದ್ ಪಾರಾಯಣ ನಡೆಯಿತು. ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಟ್ಟೆ, ಪ್ರಧಾನ ಕಾರ್ಯದರ್ಶಿ ರಫೀಕ್ ಪಡ್ಡ, ಕೋಶಾಧಿಕಾರಿ ಪಿ.ಜೆ. ಮಹಮೂದ್, ಜತೆ ಕಾರ್ಯದರ್ಶಿ ಅಬ್ದು ಸಲಾಂ ಕೇಶವ ನಗರ, ಲೆಕ್ಕ ಪರಿಶೋಧಕ ಇದ್ರಿಸ್ ಪುಲಾಬೆ, ಸದಸ್ಯರುಗಳಾದ ಇರ್ಪಾನ್ ಯು.ಕೆ., ಅಶ್ರಫ್ ಕಿರೋಡಿ, ಅಶ್ರಫ್ ಗಾಂಧಿನಗರ, ಜಮಾತಿನ ಗಣ್ಯರು ಮಕ್ಕಳು ಉಪಸ್ಥಿತರಿದ್ದರು.