ಗೇರುಕಟ್ಟೆ : ಸರಕಾರ ಗಮನ ಹರಿಸ ಬೇಕಾದ ಎರಡು ಪ್ರಮುಖ ಕೇಂದ್ರಗಳು ಯಾವುದೆಂದರೆ ಆರೋಗ್ಯ ಹಾಗೂ ಶಿಕ್ಷಣ.ಇವುಗಳ ಮೇಲೆ ನಂಬಿಕೆ ಚೆನ್ನಾಗಿದ್ದರೆ ಊರಿನ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಒಳ್ಳೆಯ ಶಿಕ್ಷಣ ಕೊಡುವುದಕ್ಕೆ ಪೂರಕವಾಗಿದೆ.
ಗ್ರಾಮಾಂತರದ ಮಕ್ಕಳಿಗೆ ಪ್ರತಿಭೆಯನ್ನು ಹೆಚ್ಚಿಸಲು ದೈಹಿಕವಾಗಿ, ಮಾನಸಿಕವಾಗಿ ಸದೃಢ ಗೊಳಿಸುವ ನಿಟ್ಟಿನಲ್ಲಿ ವಲಯ ಮಟ್ಟದ ಕ್ರೀಡೆಗಳಿಂದ ಸಾಧ್ಯವಿದೆ ಎಂದು ಸೆ.3ರಂದು ನಡೆದ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಹಾಗೂ ಪುಂಜಾಲಕಟ್ಟೆ ಪ್ರೌಢಶಾಲಾ ವಿಭಾಗದ ಬಾಲಕರ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟ ಮತ್ತು ಗೇರುಕಟ್ಟೆ ಪ್ರೌಢಶಾಲಾ ನವೀಕೃತ ಕಚೇರಿ ಉದ್ಘಾಟನೆ ಕಾರ್ಯಕ್ರಮವನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ಅವರು ಚಾಲನೆ ನೀಡಿ ಮಾತನಾಡಿದರು.
2025-26ನೇ ಸಾಲಿನ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ ಸರಕಾರಿ ಪ್ರೌಢಶಾಲೆ ಗೇರುಕಟ್ಟೆಯ ಕೊಠಡಿಗೆ ಟೈಲ್ಸ್ ಅಳವಡಿಸಲು ರೂ. 3 ಲಕ್ಷ ಅನುದಾನವನ್ನು ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಒದಗಿಸಿಕೊಟ್ಟರು.

ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ.ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗೇರುಕಟ್ಟೆ ಸಂಯುಕ್ತ ಪ್ರೌಢಶಾಲಾ ಉಪ ಪ್ರಾಂಶುಪಾಲೆ ಈಶ್ವರಿ ಕೆ.ಭಟ್, ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಗೋಪಾಲ ಗೌಡ ಎಂ., ಕಳಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಇಂದಿರಾ ಬಿ.ಶೆಟ್ಟಿ, ಸದಸ್ಯರಾದ ಸುಭಾಷಿಣಿ ಕೆ,
ಕಳಿಯ ಸಿ.ಎ. ಬ್ಯಾಂಕು ಅಧ್ಯಕ್ಷ ವಸಂತ ಮಜಲು,ಗೇರುಕಟ್ಟೆ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಲಕ್ಷ್ಮೇ ಗೌಡ, ಡಾ.ಅನಂತ ಭಟ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ಧನ ಗೌಡ ಕೆ.,ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಸುಭಾಷ್, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಮೊದಲಾದವರಿದ್ದರು.

ಗೇರುಕಟ್ಟೆ ಸಂಯುಕ್ತ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಜೀತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗ್ಲ ಮಾಧ್ಯಮ ಶಿಕ್ಷಕ ದಿನೇಶ್ ನಿರೂಪಿಸಿದರು.