ಕೊಕ್ಕಡ: ಶ್ರೀ ವೆಂಕಟರಮಣ ಸೊಸೈಟಿ ಕೊಕ್ಕಡ ಶಾಖೆ 5ನೇ ವರ್ಷಕ್ಕೆ ಪಾದಾರ್ಪಣೆ-ಗ್ರಾಹಕರಿಗೆ ಇನ್ನಷ್ಟು ಆಕರ್ಷಕ ಸೇವೆಗಳನ್ನು ನೀಡಲು ಬಯಸುತ್ತೇವೆ ಶಾಖಾ ಪ್ರಬಂಧಕ -ಸುನಿಲ್ ಮುಂಡೋಡಿ

0

ಕೊಕ್ಕಡ: ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕೊಕ್ಕಡ ಶಾಖೆಯು ತನ್ನ ಯಶಸ್ವಿ ನಾಲ್ಕು ವರ್ಷಗಳನ್ನು ಪೂರೈಸಿ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ಆ ಪ್ರಯುಕ್ತ ಶಾಖೆಯಲ್ಲಿ ಗಣಪತಿ ಹವನ ಮತ್ತು ಲಕ್ಷ್ಮೀ ಪೂಜೆ ಆ.30ರಂದು ನಡೆಯಿತು.

ಶಾಖಾ ವ್ಯವಸ್ಥಾಪಕ ಸುನಿಲ್ ಮುಂಡೋಡಿ, ಸಿಬ್ಬಂದಿಗಳಾದ ಮನೀಶ್ ಬಾರೆಪ್ಪಾಡಿ, ಕಿರಣ್ ಧರ್ಮಸ್ಥಳ, ಪಿಗ್ಮಿ ಸಂಗ್ರಾಹಕರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಗಮಿಸಿದ ಗ್ರಾಹಕ ಅತಿಥಿಗಳನ್ನು ಸ್ವಾಗತಿಸಿದರು.

ಶಾಖಾ ಪ್ರಬಂಧಕ ಸುನಿಲ್ ಮುಂಡೋಡಿ ಅವರು ಶಾಖೆಯು ಉತ್ತಮವಾಗಿ ಕೆಲಸ ಮಾಡುತ್ತಿದೆ ಗ್ರಾಹಕರಿಗೆ ಅನುಕೂಲ ವಾಗುವ ರೀತಿಯಲ್ಲಿ ಸೇವೆ ನೀಡುತ್ತಿದ್ದೇವೆ ಆಕರ್ಷಕ ಬಡ್ಡಿದರದಲ್ಲಿ ಚಿನ್ನಾಭರಣ ಸಾಲ, ಡಿಪಾಸಿಟಿ ಹಣಕ್ಕೆ ಉತ್ತಮ ಬಡ್ಡಿ ನೀಡುತ್ತಿದ್ದು ಗ್ರಾಹಕ ಸ್ನೇಹಿಯಾಗಿದ್ದೇವೆ ಎಂದು ಹೇಳಿದರು.


LEAVE A REPLY

Please enter your comment!
Please enter your name here