
ಕನ್ಯಾಡಿ: ಕನ್ಯಾಡಿಯ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಸದಸ್ಯರು ಮಧುಮೇಹದಿಂದಾಗಿ ಬಲ ಕಾಲು ಕಳೆದುಕೊಂಡ ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಸಮಿತಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಕೇಶವ. ಎಮ್ ಅವರ ಮನೆಗೆ ಭೇಟಿ ನೀಡಿ ವೈದ್ಯಕೀಯ ವೆಚ್ಚಕ್ಕಾಗಿ ಸಮಿತಿ ವತಿಯಿಂದ ಆರ್ಥಿಕ ಸಹಾಯ ಧನ ರೂ. 10,000 ನ್ನು ನೀಡಿ ಶೀಘ್ರ ಚೇತರಿಕೆಗಾಗಿ ಹಾರೈಸಿದರು.
ಕನ್ಯಾಡಿ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ರಾಜೇಶ್ ಪಿ, ಕಾರ್ಯದರ್ಶಿ ಗಣೇಶ್ ಬಜಿಲ, ಉಪಾಧ್ಯಕ್ಷ ಅರುಣ್ ನಾಯ್ಕ್, ಸಂಯೋಜಕ ರಾಘವ ಕುರ್ಮಾಣಿ, ಸಹಕಾರ್ಯದರ್ಶಿ ವಿದ್ಯಾಧರ್ ರೈ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಚೇತನ್ ಗುಡಿಗಾರ್, ಕಾರ್ಯಧ್ಯಕ್ಷ ಗೋವಿಂದ ಸುವರ್ಣ ಪೊಂಗಾರು, ಸದಸ್ಯರಾದ ಮಹಾಬಲ ನಾಯ್ಕ ಮತ್ತು ಉಮೇಶ ಆಚಾರ್ಯ ಉಪಸ್ಥಿತರಿದ್ದರು.