
ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಬೆಳ್ತಂಗಡಿ ಹಾಗೂ ಕಾರ್ಕಳ ತಾಲೂಕಿನ ಕುಟುಂಬಗಳಿಗೆ Global Wildlife Conservation Society ಸಂಸ್ಥೆಯಿಂದ ಉಚಿತವಾಗಿ ವಾಹನ ಚಾಲನ ತರಬೇತಿ ನೀಡಿ 32 ಫಲಾನುಭವಿಗಳಿಗೆ ಚಾಲನ ಪರವಾನಿಗೆ ಹಾಗೂ ತೋಟಗಾರಿಕಾ ಬೆಳೆಗಳ ಸಸಿ ವಿತರಣೆ ಕಾರ್ಯಕ್ರಮ ಆ. 18ರಂದು ಬೆಳಿಗ್ಗೆ ಗಂಟೆ 10ಕ್ಕೆ ಕುತ್ತೂರು ಮಂಜುಶ್ರೀ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕುದುರೆಮುಖ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣ ಅಧಿಕಾರಿ ಯು. ಡಾ. ಶಿವರಾಮ ಬಾಬು IFS ಅವರು ಉದ್ಘಾಟಿಸಿದರು. ಅನಂತರ ವಾಹನ ಚಾಲನ ತರಬೇತಿ ನೀಡಿ ವಾಹನ ಚಾಲನ ಪರವಾನಿಗೆ 32 ಫಲನಾಭವಿಗಳಿಗೆ ಹಸ್ತಾಂತಿಸಿದರು. ತೋಟಗಾರಿಕಾ ಬೆಳೆಗಳಾದ 3000 ಅಡಿಕೆ ಗಿಡ 100 ತೆಂಗಿನ ಗಿಡ 500 ಕಾಳು ಮೆಣಸು ರಾಮಪತ್ರೆ 200 ಮಲ್ಲಿಗೆ ಕೃಷಿ ಗಿಡಗಳನ್ನು ಆಯ್ದ ಫಲಾನುಭವಿಗಳಗೆ ಸಾಂಕೇತಿಕವಾಗಿ ನೀಡಿದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿದ ಕುಟುಂಬಗಳ ಎಲ್ಲಾ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದ NGO ಸಂಸ್ಥೆಯ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಶ್ರೀ ರಾಮಚಂದ್ರ ಭಟ್ ಕುಕ್ಕುಜೆ ಕುತ್ತೂರು ಇವರಿಗೆ ಅಭಿನಂದನೆ ಸಲ್ಲಿಸಿದರು. ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದುವ ಕುಟುಂಬಗಳಿಗೆ ಅತ್ಯುತ್ತಮ ರೀತಿಯಲ್ಲಿ ಪರಿಹಾರ ನೀಡಿ ಅವರ ಏಳಿಗೆಗೆ ಸದಾ ಸ್ಪಂದಿಸುವುದಾಗಿ ತಿಳಿಸಿದರು. ಕೆಲವೊಂದು ಕಡತಗಳ ಸಮಸ್ಯೆಯಿಂದಾಗಿ ಪುನರ್ವಸತಿ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ NGO ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾವಿ ಗ್ರಾಮ ಪಂಚಾಯತಿಯ ಅಧ್ಯಕ್ಷ ರಾಜವರ್ಮ ಜೈನ್ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇಣೂರು ಎಸ್.ಡಿ.ಎಮ್. ಐಟಿಐ ನ ಮುಖ್ಯ ಶಿಕ್ಷಕ ಶ್ರೀಧರ್ ಡಿ. ವಾಹನ ಚಾಲನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ Global Wildlife Conservation Society ಯ ಕೆಲಸಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕುದುರೆಮುಖ ವನ್ಯಜೀವಿ ಉಪ ವಿಭಾಗ ಕಾರ್ಕಳ ಸಹಾಯ ಅರಣ್ಯ ಸಂರಕ್ಷಣಾ ಅಧಿಕಾರಿ ಸತೀಶ್ ಎನ್. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ವಿ. ಶರ್ಮಿಷ್ಠ, ಅಳದಂಗಡಿ ಉಪ ವಲಯ ಅರಣ್ಯ ಅಧಿಕಾರಿ ಭರತ್, ನಾರಾವಿ ಮಾಂಡೋವಿ ಮೋಟರ್ಸ್ ಟೀಮ್ ಮ್ಯಾನೇಜರ್ ಚರಣ್ ಕುಮಾರ್, ವೇಣೂರು ನಿಕಟಪೂರ್ವ ಅಧ್ಯಕ್ಷ ಕೆ.ಎಸ್. ನಿರಂಜನ್, ಸೀತಾಶ್ರೀರಾಮ್ ಡೈವಿಂಗ್ ಸ್ಕೂಲ್ ವೇಣೂರು, ಕುತ್ತೂರು ಎಸ್.ಡಿ.ಎಮ್.ಸಿ. ಉಪಾಧ್ಯಕ್ಷೆ ಶ್ವೇತಾ ಜಗದೀಶ್, ನಾರಾವಿ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ವಿಶಾಲ, ಕುತ್ತೂರು ಸೇವಾ ಪ್ರತಿನಿಧಿ ಉಷಾ ಉಪಸ್ಥಿತರಿದ್ದರು.
ವಿದ್ಯಾ ಜೆ. ಭಟ್ ನಾರಾವಿ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಯೋಜಕ ಹಾಗೂ ಎನ್.ಜಿ.ಒ ವನ್ಯಜೀವಿ ಸಂರಕ್ಷಕ ರಾಮಚಂದ್ರ ಭಟ್ ಕುಕ್ಕುಜೆ ಕುತ್ತೂರು ಸ್ವಾಗತಿಸಿ, ಸಂಸ್ಥೆ ಈವರೆಗೆ ನಡೆಸಿದ ಅರಣ್ಯ ಸಂರಕ್ಷಣೆ ಹಾಗೂ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದರು. ಅಲ್ಲದೆ ಪುನರ್ವಸತಿ ಹೊಂದಿರುವ ಕುಟುಂಬಗಳ ಸರ್ವತೋಮುಖ ಬೆಳವಣಿಗೆಗೆ ಕಾರಣೀಕರ್ತರಾದ ಎಲ್ಲಾ ಇಲಾಖೆಯ ಹಾಗೂ ಸರಕಾರವನ್ನು ಅಭಿನಂದಿಸಿದರು.
ಬೆಳ್ತಂಗಡಿ ತಾಲೂಕಿನ ಕುತ್ತೂರು ಗ್ರಾಮದ ಕುರಿಯಾಡಿ ಸುತ್ತುಗಟ್ಟಿನಿಂದ 2014ರಲ್ಲಿ ಪುನರ್ವಸತಿ ಹೊಂದಿ ಈಗ ನೆಲ್ಲಿಕಾರು ಗ್ರಾಮದ ಪೆರ್ನೊಡಿ ರಾಧಿಕ ನಿವಾಸದಲ್ಲಿ ವಾಸ್ತವ್ಯವಿದ್ದು ಅತ್ಯುತ್ತಮ ಕೃಷಿ ಮಾಡಿ ಕುಟುಂಬದ ಬೆಳವಣಿಗೆಗೆ ಕಾರಣೀಕರ್ತರಾಗಿ ಉತ್ತಮ ಪುನರ್ವಸತಿ ಕುಟುಂಬ ಎಂದು ಪ್ರಶಂಸೆಗೆ ಪಾತ್ರರಾದ ಬಾಬು ಮಲೆಕುಡಿಯರವರ ಪರವಾಗಿ ಅವರ ಪುತ್ರ ಗಣೇಶ ಅವರನ್ನು ಶಾಲು ಹೂ ಹಾರ ಹಾಕಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿದ ದನಂತಿ ಪರ್ನೋಡಿ, ದೇವಪ್ಪ ಮಲೆಕುಡಿಯ ನೂರಾಳಬೆಟ್ಟು, ಗಣೇಶ ಸುಕ್ಕೇರಿ, ವನಂತ ಪೂಜಾರಿ ಸುಕ್ಕೇರಿ ಪುನರ್ವಸತಿ ಹೊಂದಿ ಒಳ್ಳೆಯ ಜೀವನ ನಡೆಸುತ್ತಿರುವ ಬಗ್ಗೆ ಹಾಗೂ ಎನ್.ಜಿ.ಒ ದವರಾದ ಕೆ. ರಾಮಚಂದ್ರ ಭಟ್ರವರು ಮಾಡಿದ ಸಹಾಯವನ್ನು ನೆನಪಿಸಿ ಇನ್ನೂ ಪುನರ್ವಸತಿ ಹೊಂದುವ ಕುಟುಂಬಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಉಮೇಶ್ ಎಮ್.ಕೆ. ಮಾಪಾಲು ನಾರಾವಿ ಕಾರ್ಯಕ್ರಮ ನಿರೂಪಣೆ ಮಾಡಿ ಧನ್ಯವಾದವಿತ್ತರು.