ಬೆಳ್ತಂಗಡಿ – ಉಪ್ಪಿನಂಗಡಿ ಅರಣ್ಯ ಉಪವಿಭಾಗದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಪ್ರಕರಣ: ಬೆಳೆ ಹಾನಿಗೊಳಗಾದ ಸಂತ್ರಸ್ಥರಿಗೆ ಶಾಸಕರಿಂದ ಪರಿಹಾರ ಮೊತ್ತದ ಚೆಕ್ ವಿತರಣೆ

0

ಬೆಳ್ತಂಗಡಿ: ಅರಣ್ಯ ಉಪವಿಭಾಗ ಹಾಗೂ ಉಪ್ಪಿನಂಗಡಿ ಅರಣ್ಯ ವಿಭಾಗದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಹಾಗೂ ಹಾನಿಗೊಳಗಾದ ಸಂತ್ರಸ್ಥರಿಗೆ ಶಾಸಕ ಹರೀಶ್ ಪೂಂಜ ಅವರು ಆ.15ರಂದು ಬೆಳ್ತಂಗಡಿ ನಿರೀಕ್ಷಣಾ ಮಂದಿರದಲ್ಲಿ ಚೆಕ್‌ ಹಸ್ತಾಂತರಿಸಲಾಯಿತು.

ಕಳೆದ ಜುಲೈ ತಿಂಗಳಲ್ಲಿ ಕೊಕ್ಕಡದ ಸೌತಡ್ಕದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ, ಅವರ ಪತ್ನಿ ಸುಜಾತ ಅವರಿಗೆ 20 ಲಕ್ಷ ರೂ., ಬೆಳೆ ನಾಶ ಮಲವಂತಿಗೆ ಗ್ರಾಮದ ವಸಂತಿ ರೂ.81 ಸಾವಿರ, ಚಾರ್ಮಾಡಿ ಗ್ರಾಮದ ಕುಂಞ ಮಲೆಕುಡಿಯ ಅವರಿಗೆ 1.6, ಲಕ್ಷ ರೂ., ಧರ್ಮಸ್ಥಳ ಗ್ರಾಮದ ಬೋಳಿಯರು ಎಂಬಲ್ಲಿ ಆನೆ ದಾಳಿಯಿಂದ ಆಟೋ ರಿಕ್ಷಾ ನಜ್ಜುಗುಜ್ಜು ಗೊಂಡು ಹಾನಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಅವರಿಗೆ ರೂ.20 ಸಾವಿರ ವಿತರಿಸಲಾಯಿತು.

ಈ ವೇಳೆ ಪುತ್ತೂರು ಉಪ ವಿಭಾಗ ಎಸಿಎಫ್‌ ಸುಬ್ಬಯ್ಯ ನಾಯ್ಕ, ಮಂಗಳೂರು ಉಪ ವಿಭಾಗ ಎಸಿಎಫ್‌ ಶಿವಾನಂದ್‌ ವಿಭೂತೆ, ಉಪ್ಪಿನಂಗಡಿ ಆ‌ರ್.ಎಫ್.ಒ ರಾಘವೇಂದ್ರ ಹಾಗೂ ಬೆಳ್ತಂಗಡಿ ಆರ್.ಎಫ್.ಒ. ತ್ಯಾಗರಾಜ್‌ ಟಿ.ಎನ್. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here